04-07-2023 ರಂದು ಮಲ್ಪೆಯ ನಾರಾಯಣ ಗುರು ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ,ಯಕ್ಷ ಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ಉದ್ಘಾಟನೆಗೊಂಡಿತು.ಟ್ರಸ್ಟ್ ಕಾರ್ಯದರ್ಶಿ ಮುರಳಿ ಕಡೆಕಾರ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿ,ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯ ಶಶಿಕುಮಾರ್ ಸ್ವಾಗತಿಸಿದರು.ಗುರುಗಳಾದ ನಿತ್ಯಾನಂದ ಶೆಟ್ಟಿಗಾರ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗೀತಾ ಶೆಟ್ಟಿ ಉಪಸ್ಥಿತರಿದ್ದ ಕಾರ್ಯಕ್ರಮದ ಕೊನೆಗೆ ಶಿಕ್ಷಕಿ ಶ್ರೀಮತಿ ಸಂಧ್ಯಾ ಧನ್ಯವಾದ ಸಲ್ಲಿಸಿದರು.ವಿದ್ಯಾರ್ಥಿನಿ ಅನನ್ಯ ಕಾರ್ಯಕ್ರಮ ನಿರ್ವಹಿಸಿದಳು.40 ವಿದ್ಯಾರ್ಥಿಗಳು ಯಕ್ಷಗಾನ ತರಬೇತಿಯಲ್ಲಿ ಪಾಲುಗೊಳ್ಳುತ್ತಿದ್ದಾರೆ.ಆರಂಭದಲ್ಲಿ ಅಗಲಿದ, ಭಾಗವತರಾದ ತೋನ್ಸೆ ಜಯಂತ್ ಕುಮಾರ್ ಇವರಿಗೆ ಶ್ರದ್ಧಾಂಜಲಿಪೂರ್ವಕ ನುಡಿ ನಮನ ಸಲ್ಲಿಸಲಾಯಿತು.