Yakshagana Kalaranga

ಅರ್ಥಧಾರಿಗಳು ಪುರಾಣದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ವಾಹಕರು – ಡಾ. ಕಬಿಯಾಡಿ ಹರಿರಾಮ ಆಚಾರ್ಯ

ಯಕ್ಷಗಾನ ಕಲಾರಂಗ ಕಳೆದ 23 ವರ್ಷಗಳಿಂದ ತಾಳಮದ್ದಲೆ ಸಪ್ತಾಹ ಆಚರಿಸುತ್ತಾ ಬಂದಿದ್ದು, ಈ ಬಾರಿಯ ತಾಳಮದ್ದಲೆ ಸಪ್ತಾಹವು ಮೇ 21, 2023ರಂದು ಸಂಜೆ 5.00 ಗಂಟೆಗೆ ಪರ್ಕಳದ ವಿಘ್ನೇಶ್ವರ ಸಭಾಭವನದಲ್ಲಿ ಉದ್ಘಾಟನೆಗೊಂಡಿತು. ಖ್ಯಾತ ವೈದ್ಯ ಡಾ. ಕಬ್ಯಾಡಿ ಹರಿರಾಮ ಆಚಾರ್ಯರು ಸಪ್ತಾಹವನ್ನು ದೀಪ ಬೆಳಗಿಸಿ ಉದ್ಘಾಟಿಸಿ ತಾಳಮದ್ದಲೆಯ ಕುರಿತು ಮಾತನಾಡುತ್ತಾ ಮೇಲಿನ ಮಾತನ್ನು ಉಲ್ಲೇಖಿಸಿದರು. ಉಡುಪಿಯ ಮಾನ್ಯ ಶಾಸಕರಾದ ಯಶ್‍ಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಹಿರಿಯ ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ, ಕರ್ಣಾಟಕ ಬ್ಯಾಂಕ್‍ನ ಎ.ಜಿ.ಎಂ. ಬಿ. ರಾಜ ಗೋಪಾಲ, ಪರ್ಕಳದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ದಿಲೀಪ್‍ರಾಜ್ ಹೆಗ್ಡೆ ಹಾಗೂ ಪಾಟೀಲ್ ಕ್ಲೋತ್ ಸ್ಟೋರ್‌ನ ಮಾಲಕರಾದ ಗಣೇಶ ಪಾಟೀಲ್ ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ. ಭಟ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಇಂದು ನಿಧನರಾದ ಸಂಸ್ಥೆಯ ಆಜೀವ ಸದಸ್ಯರಾಗಿದ್ದ ಮಾಜಿ ಶಾಸಕ ಯು. ಆರ್. ಸಭಾಪತಿ ಹಾಗೂ ಯಕ್ಷಗಾನ ಕಲಾವಿದ ರಾಮಕೃಷ್ಣ ಶೆಟ್ಟಿಗಾರ್ ಇವರಿಗೆ ಕಾರ್ಯದರ್ಶಿ ಮುರಲಿ ಕಡೆಕಾರ್ ನುಡಿನಮನ ಸಲ್ಲಿಸಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಜತೆಕಾರ್ಯದರ್ಶಿ ಹೆಚ್.ಎನ್. ಶೃಂಗೇಶ್ವರ ವಂದಿಸಿದರು. ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದ ಬಳಿಕ ‘ಭೀಷ್ಮಾರ್ಜುನ’ ತಾಳಮದ್ದಲೆ ಪ್ರಸ್ತುತಗೊಂಡಿತು. ಸಪ್ತಾಹವು ಮೇ 21ರಿಂದ 27ರ ವರೆಗೆ ವಿವಿಧ ಸ್ಥಳಗಳಲ್ಲಿ ನಡೆಯಲಿದೆ.ನಮ್ಮ ಕುಡ್ಲ ವಾಹಿನಿಯಲ್ಲಿ ನೇರ ಪ್ರಸಾರವಿದೆ.

We're currently hard at work gathering information and crafting content to bring you the best experience. Stay tuned for exciting updates!