ಕಿಶೋರ ಯಕ್ಷಗಾನ ಸಂಭ್ರಮ-2022ರ 6ನೇ ದಿನದ ಪ್ರದರ್ಶನವಾಗಿ ನಿನ್ನೆ (02-12-2022) ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶೆಟ್ಟಿಬೆಟ್ಟು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಸೀತಾ ಕಲ್ಯಾಣ (ನಿ: ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ) ಹಾಗೂ ಉಡುಪಿ ಸರಕಾರಿ ಹುಡುಗಿಯರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಪಾಂಚಜನ್ಯ (ನಿ: ಕೀರ್ತನಾ ಉದ್ಯಾವರ) ಯಕ್ಷಗಾನ ಪ್ರದರ್ಶನಗೊಂಡಿತು.