ಕಿಶೋರ ಯಕ್ಷಗಾನ ಸಂಭ್ರಮ-2022ರ 5ನೇ ದಿನದ ಪ್ರದರ್ಶನವಾಗಿ ನಿನ್ನೆ (01-12-2022) ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮಲ್ಪೆ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ರಾಮಾಶ್ವಮೇಧ (ನಿ: ರತ್ನಾಕರ ಆಚಾರ್) ಹಾಗೂ ಕಡಿಯಾಳಿ ಯು. ಕಮಲಾ ಬಾಯಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಂದ ಶಶಿಪ್ರಭಾ ಪರಿಣಯ (ನಿ: ನರಸಿಂಹ ತುಂಗ) ಯಕ್ಷಗಾನ ಪ್ರದರ್ಶನಗೊಂಡಿತು. ದಾವಣಗೆರೆಯಿಂದ ಪ್ರವಾಸಕ್ಕೆ ಬಂದ ಸುಮಾರು 150 ವಿದ್ಯಾರ್ಥಿಗಳು ಕರಾವಳಿ ಕರ್ನಾಟಕದ ಅಪೂರ್ವ ಯಕ್ಷಗಾನವನ್ನು ವೀಕ್ಷಿಸಿ ಸಂತಸಪಟ್ಟು, ಗ್ರೂಫ್ ಫೋಟೋದಲ್ಲಿ ಭಾಗಿಯಾದರು. ಹೀಗೆ ಪ್ರತೀದಿನ ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳು ಯಕ್ಷಗಾನವನ್ನು ವೀಕ್ಷಿಸಿ ಸಂತಸ ಪಡುತ್ತಿರುವುದು ಯಕ್ಷಶಿಕ್ಷಣ ಟ್ರಸ್ಟ್ ಗೆ ಧನ್ಯತೆಯನ್ನುಂಟುಮಾಡುವ ವಿಚಾರವಾಗಿದೆ