Yakshagana Kalaranga

ಜೀವನ ವಿದ್ಯಾ ಸನಿವಾಸ ಶಿಬಿರ ಸಮಾರೋಪ

ಉಡುಪಿ: ಉಡುಪಿಯ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಆಯೋಜೀಸಿದ್ದ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕ್ ವಿದ್ಯಾರ್ಥಿಗಳ ಐದು ದಿನಗಳ ಶೈಕ್ಷಣಿಕ ಸನಿವಾಸ ಶಿಬಿರ ‘ಜೀವನ ವಿದ್ಯಾ’ದ ಸಮಾರೋಪ ಸಮಾರಂಭ 28.02.2026 ರಂದು ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹರಿಕೃಷ್ಣ ಭಟ್ ಜಪಾನ್ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಹೊಸ, ಹೊಸ ಕೌಶಲಗಳನ್ನುಕಲಿತು ಸದಾ ಜ್ಞಾನ ವರ್ಧನೆ ಮಾಡಿ ಕೊಳ್ಳುತ್ತಿರಬೇಕು. ಉದ್ಯೋಗವಕಾಶಗಳು ಅಂಥವರನ್ನು ಹುಡುಕಿಕೊಂಡು ಬರುತ್ತವೆ. ನಾಗರಿಕ ಪ್ರಜ್ಞೆ, ಪರಿಸರ ಪ್ರೀತಿ, ಸಾಮಾಜಿಕ ಕಳಕಳಿ ಪ್ರತಿಯೊಬ್ಬರಲ್ಲಿರಬೇಕಾದ ಮೂಲಭೂತ ಸಂಗತಿಗಳಾಗಿವೆ. ಯಕ್ಷಗಾನ ಕಲಾರಂಗದ ಕಾರ್ಯಕರ್ತರು ಈ ಕಾರಣಕ್ಕಾಗಿ ಅಭಿನಂದನಾರ್ಹರು ಎಂದು ಹೇಳಿದರು. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳರು ಪ್ರಮಾಣಪತ್ರ ವಿತರಣೆ ಮಾಡಿದರು. ಉದ್ಯಮಿ ಶ್ರೀಕಾಂತ ಅರಿಮಣಿತ್ತಾಯರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಉದ್ಯೋಗವಕಾಶಕ್ಕೆ ಪೂರಕವಾದ ಕೌಶಲಗಳನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಪ್ರೊ. ಸಖಾರಾಮ ಸೋಮಯಾಜಿ, ಬಿ. ನರಹರಿ, ಪಿ. ಸತೀಶ್ ರಾವ್, ಶ್ರೀಧರ ಶೇಟ್, ಮಾರಾಳಿ ಪ್ರತಾಪ ಹೆಗ್ಡೆ ಅಭ್ಯಾಗತರಾಗಿ ಭಾಗವಹಿಸಿದ್ದರು. ಶಿಬಿರದ ನಿರ್ದೇಶಕರಾದ ಮಂಗಳೂರಿನ ಪ್ರೊಟೊ ಅಪ್ ಸ್ಕಿಲ್‍ನ ಗುರುದತ್ತ ಬಂಟ್ವಾಳಕರ್, ಸಹನಾ ಕಿಣಿ ಹಾಗೂ ಬಳಗದವರನ್ನು ಗೌರವಿಸಲಾಯಿತು. ಉಪಾಧ್ಯಕ್ಷರಾದ ಎಸ್. ವಿ. ಭಟ್, ವಿ. ಜಿ ಶೆಟ್ಟಿ, ವಿಶ್ವನಾಥ ಶೆಣೈ, ಯು. ಎಸ್ ರಾಜಗೋಪಾಲ ಆಚಾರ್ಯ, ಭುವನ ಪ್ರಸಾದ ಹೆಗಡೆ, ಡಾ. ಸುದರ್ಶನಮೂರ್ತಿ ದಂಪತಿಗಳು ಉಪಸ್ಥಿತರಿದ್ದರು. ಹತ್ತು ಜನ ವಿದ್ಯಾರ್ಥಿಗಳು ಶಿಬಿರದ ತಮ್ಮ ಅನುಭವವನ್ನು ಹಂಚಿಕೊಂಡರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು, ಭಾಗವಹಿಸಿದ ಶಿಬಿರಾರ್ಥಿಗಳಿಗೆ ಗುಂಪು ಛಾಯಾಚಿತ್ರ ವಿತರಿಸಲಾಯಿತು. ಐದು ದಿನಗಳ ಶಿಬಿರದಲ್ಲಿ ನೇಮಿಚಂದ್ರ, ಪ್ರವೀಣ ವಿ. ಗುಡಿ,ಎಸ್. ವೆಂಕಟೇಶ್, ನಂದಾ ವೆಂಕಟೇಶ್ ಡಾ.ವಿರೂಪಾಕ್ಷ ದೇವರಮನೆ, ಡಾ. ಜೆ. ಎನ್. ಭಟ್, ಪಿ. ವಾಸುದೇವ ಐತಾಳ್, ಡಾ. ಶಾರದಾ ಎಂ, ಬಿ. ಭಾಸ್ಕರ ರಾವ್, ಸ್ವಸ್ತಿಕ್ ಕೆ. ಜೆ., ಡಾ. ಅಪರ್ಣಾ ಶಾನುಭಾಗ್, ಡಾ. ಗೀತಾ ಸಾಮಕ್, ಡಾ. ಪಿ ಅನಂತಕೃಷ್ಣ ಭಟ್, ವಿಜಯ ಕುಮಾರ್ ಮುದ್ರಾಡಿ, ಸಂಸ್ಕೃತಿ ಶೆಟ್ಟಿಗಾರ್, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಪ್ರಸಾದ, ಅಶೋಕ ಎಂ. ಸಹಕರಿಸಿದರು. ಶಿಬಿರದಲ್ಲಿ ಉಡುಪಿ ಜಿಲ್ಲೆಯ 244 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಬಿರದ ನಾಲ್ಕನೇ ದಿನ ರಾತ್ರಿ ನಡೆಸಿದ ಕ್ಯಾಂಪ್ ಫೈರ್‍ನಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣ, ಆದ್ಯತಾ ಭಟ್ ಮತ್ತು ಬಳಗದವರು ಸೊಗಸಾಗಿ ಯಕ್ಷಗಾನದ ತುಣುಕನ್ನು ಪ್ರಸ್ತುತಪಡಿಸಿ ವಿದ್ಯಾರ್ಥಿಗಳನ್ನು ಮುದಗೊಳಿಸಿದರು. ಮರುದಿನ ಪೂರ್ವಾಹ್ನ ನಡೆಸಿದ ಸ್ವಚ್ಛತಾ ಅಭಿಯಾನ ವಿದ್ಯಾರ್ಥಿಗಳಿಗೆ ವಿಶೇಷ ಸ್ಫೂರ್ತಿ ನೀಡಿತು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!