Yakshagana Kalaranga

ಸೇವಾಭೂಷಣ ಪ್ರಶಸ್ತಿ ಪ್ರದಾನ – 2026

ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಫೆಬ್ರವರಿ 27 ರಂದು ಸೇವಾಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ ಯು. ಶ್ರೀಧರ ಮಾತನಾಡುತ್ತಾ ನಾನು ಬರೆಯಲು ತೊಡಗಿದ್ದು ನನ್ನ 73ರ ಹರೆಯದಲ್ಲಿ. ಶ್ರೀ ನಾರಾಯಣ ಗುರುಗಳ ತತ್ವದಿಂದ ಪ್ರಭಾವಿತನಾದೆ ಅದನ್ನು ಬೇರೆಯವರಿಗೆ ಹೇಳುವ ಮೊದಲು ನಾನು ರೂಢಿಸಿಕೊಳ್ಳ ಬೇಕೆನಿಸಿತು ಅಷ್ಟನ್ನೇ ಮಾಡಿದ್ದೇನೆ. ನಾನೇನು ದೊಡ್ಡ ವ್ಯಕ್ತಿಯಲ್ಲ ಎಂದು ವಿನಮ್ರವಾಗಿ ನುಡಿದರು. ಮಕ್ಕಳನ್ನುದ್ದೇಶಿಸಿ ಯಕ್ಷಗಾನ ಕಲಾರಂಗದಂತಹ ಸಂಸ್ಥೆ ಸಿಕ್ಕಿರುವುದು ನಿಮ್ಮ ಭಾಗ್ಯ. ಸತ್ಯ, ಸರಳತೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮೈಗೂಡಿಸಿಕೊಳ್ಳಿ ಅದೇ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು. ಡಾ. ಎ. ವಿ. ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ. ವಿರುಪಾಕ್ಷ ದೇವರುಮನೆಯವರು ಯು. ಶ್ರೀಧರ್ ಅವರನ್ನು ಅಭಿನಂದಿಸಿ ನೆರೆಮನೆಯವನಾಗಿ ಅವರ ಕ್ರಿಯಾಶೀಲತೆ, ಜೀವನೋತ್ಸಾಹ, ಸಮಾಜ ಪ್ರೀತಿಯನ್ನು ಹತ್ತಿರದಿಂದ ಕಂಡು ಮೆಚ್ಚಿಕೊಂಡಿದ್ದೇನೆ ಎಂದರು. ಕರ್ನಲ್ ಮಾಧವ ಶ್ಯಾನುಭಾಗ್, ಡಾ. ಜೆ. ಎನ್. ಭಟ್ ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಿ. ಭಟ್, ವಿ. ಜಿ. ಶೆಟ್ಟ ವೇದಿಕೆಯಲ್ಲಿ ಉಪಸ್ಥಿತರಿಸಿದ್ದರು. ಎಸ್ ಗೋಪಲಾಕೃಷ್ಣ ಮತ್ತು ಎಚ್. ಎನ್. ಶೃಂಗೇಶ್ವರರ ಪತ್ನಿ ಕುಟುಂಬಿಕರು, ಯು. ಶ್ರೀಧರರ ಬಂಧುಗಳು ಭಾಗವಹಿಸಿದ್ದರು. ನಾರಾಯಣ ಎಂ. ಹೆಗಡೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾ ಪ್ರಸಾದ್ ವಂದಿಸಿದರು. 27 ವರ್ಷ ಸಂಸ್ಥೆಯ ಕೋಶಾಧಿಕಾರಿಯಾಗಿ ಸೇವೆಸಲ್ಲಿಸಿದ ಎಸ್. ಗೋಪಾಲಕೃಷ್ಣ ಮತ್ತು 35 ವರ್ಷಗಳ ಕಾಲ ಕಾರ್ಯಕರ್ತ, ಜೊತೆಕಾರ್ಯದರ್ಶಿಯಾಗಿದ್ದ ಎಚ್. ಎನ್. ಶೃಂಗೇಶ್ವರ ಇವರೀರ್ವರ ಸರಳತೆ, ಕರ್ತವ್ಯ ನಿಷ್ಠೆ, ಆಸ್ತಿಕತೆ, ಸಮಾಜ ಪ್ರೀತಿಯನ್ನು ಹೇಳುತ್ತಾ ಅವರನ್ನು ಪರಿಚಯಿಸಿ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!