Yakshagana Kalaranga

ಯಕ್ಷಗಾನ ಕಲಾರಂಗದ 85ನೆಯ ಮನೆ ಹಸ್ತಾಂತರ

ಯಕ್ಷಗಾನ ಕಲಾರಂಗ ವಿದ್ಯಾ ಪೋಷಕ್‍ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕೃಷ್ಲಾಂಜಲಿ ಆರ್. ಶೆಟ್ಟಿ (ಶ್ರೀಮತಿ ರೂಪಾ ಶೆಟ್ಟಿ ಮತ್ತು ಶ್ರೀ ರತನ್ ಶೆಟ್ಟಿ ಇವರ ಪುತ್ರಿ) ಇವಳಿಗೆ ಬ್ರಹ್ಮಾವರ ತಾಲೂಕಿನ ಎಳ್ಳಂಪಳ್ಳಿಯಲ್ಲಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ವಿಜಯ ಕುಮಾರ್ ಮುದ್ರಾಡಿ ಇವರ ಪ್ರಾಯೋಜಕತ್ವದಲ್ಲಿ, 6,50,000/- ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ‘ವಿಶ್ವಸ್ಮೈ’ ಮನೆಯನ್ನು 28.01.2026ರಂದು ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ವಿದ್ಯಾ ಸಂಪತ್ತಿಗಿಂತ ಮಿಗಿಲಾದ ಸಂಪತ್ತಿಲ್ಲ. ಯಕ್ಷಗಾನ ಕಲೆ – ಕಲಾವಿದರಿಗಾಗಿ ಕೆಲಸ ಮಾಡುವ ಸಂಸ್ಥೆ, ಅದನ್ನೂ ಅತಿಶಯವಾಗಿ ನಿರ್ವಹಿಸುತ್ತಾ ವಿದ್ಯಾಪೋಷಕ್‍ ಘಟಕದ ಮೂಲಕ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವ ಕಾರ್ಯ ಮಾಡುತ್ತಿರುವುದು ಅನ್ಯಾದೃಶ. ಸಮಾಜದ ಕಷ್ಟಕ್ಕೆ ಸ್ಪಂದಿಸುತ್ತ ‘ಜನ ಸೇವೆಯೇ ಜನಾರ್ದನ ಸೇವೆ’ ಎಂಬುದನ್ನು ಮಾಡಿ ತೋರಿಸಿದ್ದಾರೆ. ಎಲ್ಲರ ಪ್ರೀತಿ ವಿಶ್ವಾಸ ಗಳಿಸುತ್ತಾ ಸಂಸ್ಥೆಯನ್ನು ಬೆಳೆಸಿದ ನಾಯಕತ್ವ ಮತ್ತು ಕಾರ್ಯಕರ್ತರು ಅಭಿನಂದನಾರ್ಹರು. ವಿದ್ಯೆ ಅಂತಿಮವಾಗಿ ಭಗವಂತನ ಅರಿವು ಮೂಡಿಸಿ ಆತ್ಮೋದ್ಧಾರಕ್ಕೆ ಕಾರಣವಾಗಬೇಕು ಎಂದು ಸ್ವಾಮೀಜಿ ಅನುಗ್ರಹಿಸಿದರು. ವಿಜಯ ಕುಮಾರ್ ಮುದ್ರಾಡಿಯವರು ಕಲಾರಂಗದ ನಾಯಕತ್ವ ಮತ್ತು ಸದಸ್ಯರ ಒಡನಾಟ ನನ್ನ ಬದುಕಿಗೆ ತಿರುವು ನೀಡಿದೆ. ಕಷ್ಟದ ಸಂದರ್ಭದಲ್ಲಿ ದೇವರನ್ನು ಸ್ಮರಿಸುವಂತೆ ಈ ಸಂಸ್ಥೆಯ ಪುಣ್ಯಕಾರ್ಯ ನೆನಪಿಸಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳುತ್ತೇನೆ ಎಂದರು. ಸನತ್ ಕುಮಾರ್ ಮುದ್ರಾಡಿ, ಸುಮಾ ವಿಜಯಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಕಾರ್ಯಕಾರಿ ಸಮಿತಿ ಸದಸ್ಯರಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ಅನಂತ ರಾಜ ಉಪಾಧ್ಯಾಯ, ಹಿರಿಯಣ್ಣ ಕಿದಿಯೂರ್, ನಿರಂಜನ ಭಟ್, ಕಿಶೋರ್ ಸಿ. ಉದ್ಯಾವರ, ಎಚ್. ಎನ್. ವೆಂಕಟೇಶ್, ಡಾ. ರಾಜೇಶ್ ನಾವುಡ, ಗಣೇಶ್ ಬ್ರಹ್ಮಾವರ, ದಿನೇಶ್ ಪೂಜಾರಿ, ಗಣಪತಿ ಭಟ್, ಅಶೋಕ್ ಎಂ., ಪ್ರಭಾಕರ ಭಂಡಿ, ನಾಗರಾಜ್ ಹೆಗಡೆ, ಮಂಜುನಾಥ್ ಭಾಗವಹಿಸಿದ್ದರು. ಉಡುಪಿ ಲಯನ್ಸ್ ಅಧ್ಯಕ್ಷರಾದ ದಿನೇಶ್ ಕಿಣಿ, ಜೊತೆ ಕಾರ್ಯದರ್ಶಿ ಪ್ರಕಾಶ್ ಭಟ್, ದತ್ತಾತ್ರೇಯ ಹೆಗ್ಡೆ, ಪ್ರಸನ್ನ ದತ್ತ್, ಉಷಾ ಸನತ್ ಕುಮಾರ್ ಉಪಸ್ಥಿತರಿದ್ದರು. ಸಂಸ್ಥೆಯ ಹಿತೈಷಿಗಳಾದ ಭಾಸ್ಕರ ಭಟ್, ಮೀನಾಲಕ್ಷಣಿ ಅಡ್ಯಂತಾಯ, ತಾರಾ ಮೇಡಂ, ಗೋವಿಂದರಾಜ್, ರಾಘವೇಂದ್ರ ಬಾಧ್ಯ, ರಾಜೇಶ್ವರಿ ಬಾಧ್ಯ, ನರಸಿಂಹಮೂರ್ತಿ, ಜಯರಾಮ್ ಪಡಿಯಾರ್, ಮಂಜುನಾಥ ನಾಯ್ಕ್, ಸರಸ್ವತಿ ಜಿ. ರಾವ್, ರೇಖಾ ಹೆಗಡೆ, ವಿನೋದಾ ಎಂ., ಪ್ರಸನ್ನ ಹೆಗಡೆ, ನಮಿತಾ, ಗುರು, ಸಪ್ತಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!