













ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಪ್ರಥಮ ಪಿಯುಸಿ ವಿದ್ಯಾರ್ಥಿನಿ ವರ್ಷಿತಾ (ಶ್ರೀಮತಿ ಮಂಜುಳಾ ಮತ್ತು ಶ್ರೀ ಕೇಶವ ಇವರ ಪುತ್ರಿ) ಇವಳಿಗೆ ಪೆರ್ಣಂಕಿಲದ ವರ್ವಾಡಿಯಲ್ಲಿ ಬೆಂಗಳೂರಿನ ಟೆಕ್ಸೆಲ್ ಮಾರ್ಕೆಟಿಂಗ್ ಕಾರ್ಪೊರೇಶನ್ ಪ್ರವರ್ತಕರಾದ ಶ್ರೀ ಹರೀಶ್ ರಾಯಸ್ ಅವರು ತಮ್ಮ 60ರ ವರ್ಷಾಚರಣೆಯ ಸಂದರ್ಭದಲ್ಲಿ 6.50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ‘ಹರಿಗುರು ಕೃಪಾ’ ಮನೆಯನ್ನು 20.12.2025 ರಂದು ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಯಕ್ಷಗಾನ ಕಲಾರಂಗದ ಕಾರ್ಯಕರ್ತರ ಸಾಮಾಜಿಕ ಬದ್ಧತೆ, ಕೃತಜ್ಞತಾ ಮನೋಭಾವ ಸಾಮಾಜಿಕವಾಗಿ ಕೆಲಸ ಮಾಡುವವರಿಗೆ ಮಾದರಿಯಾಗಿದೆ. ಸಂಸ್ಥೆಗೆ ನೀಡಿದ ಮೊತ್ತದ ಒಂದು ಪೖಸೆಯೂ ಪೋಲಾಗದೆ ಸದ್ವಿನಿಯೋಗವಾಗುತ್ತದೆ. ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಕಲೆಯ ಪೋಷಣೆ,ಕಲಾವಿದರಿಗೆ ಸಹಾಯ, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ, ಪ್ರೌಢ ಶಾಲಾ ವಿದ್ಯರ್ಥಿಗಳಿಗೆ ಯಕ್ಷಶಿಕ್ಷಣ, ಮನೆಯಿಲ್ಲದವರಿಗೆ ಮನೆ ನಿರ್ಮಿಸಿ ಕೊಡುವ ಕೆಲಸ ಹೀಗೆ ಸಂಸ್ಥೆ ಮಾಡುತ್ತಿರುವ ಕಾರ್ಯದ ಅಗಾಧತೆ ಬೆರಗುಗೊಳಿಸುವಂತಿದೆ. ಎಷ್ಟೇ ಒತ್ತಡದಲ್ಲಿದ್ದರೂ ಕಲಾರಂಗದ ಕಾರ್ಯಕ್ರಮಕ್ಕೆ ಬಂದಾಗ ನೆಮ್ಮದಿ ಅನುಭವಿಸುತ್ತೇನೆ ಎಂದರು. ಶ್ರೀಮತಿ ವಾರಿಜಾ ರಮೇಶ, ಶ್ರೀಮತಿ ರೂಪಾ ಹರೀಶ್, ಶ್ರೀಮತಿ ಶೈಲಜಾ ಶ್ರೀಕಾಂತ್, ಶ್ರೀ ಗುರುಪ್ರಕಾಶ್ ರಾಯಸ, ಶ್ರೀಮತಿ ಸರಿತಾ ಜಿ ರಾಯಸ, ಶ್ರೀ ಸನತ್ ಕುಮಾರ್, ಅರ್ಚನಾ ಹರೀಶ್ ಇವರು ಅಭ್ಯಾಗತರಾಗಿ ಭಾಗವಹಿಸಿದ್ದರು.ಪಂಚಾಯತ್ ಅಧ್ಯಕ್ಷ ಸಂದೀಪ್ ಮಡಿವಾಳ, ಸದಸ್ಯರಾದ ಸದಾನಂದ ಪ್ರಭು,ನಿವೃತ್ತ ಪ್ರಾoಶುಪಾಲ ಶ್ರೀನಿವಾಸ್ ಪ್ರಭು, ಪ್ರಾoಶುಪಾಲ ಮಂಜುನಾಥ ಭಟ್, ಸಾಮಾಜಿಕ ಕಾರ್ಯಕರ್ತ ಶ್ರೀಶ ನಾಯಕ್, ವಿಷ್ಣುಮೂರ್ತಿ ಆಚಾರ್ಯ ದಂಪತಿಗಳು, ಮಹೇಶ್ ಕುಲಕರ್ಣಿ, ಮುರಳೀಧರ ಹಾಲಂಬಿ,ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್.ವಿ.ಭಟ್, ವಿ.ಜಿ. ಶೆಟ್ಟಿ ಕೋಶಾಧಿಕಾರಿ ಕೆ.ಸದಾಶಿವ ರಾವ್,ಸದಸ್ಯರಾದ ಯು.ವಿಶ್ವನಾಥ ಶೆಣೈ, ಯು.ಎಸ್.ರಾಜಗೋಪಲ ಆಚಾರ್ಯ, ಭುವನ ಪ್ರಸಾದ ಹೆಗ್ಡೆ, ವಿಜಯಕುಮಾರ್ ಮುದ್ರಾಡಿ, ನಾಗರಾಜ ಹೆಗಡೆ ಉಪಸ್ಥಿತರಿದ್ದರು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.