


















































ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭವು ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ 23.11.2025 ರಂದು ಅತ್ಯಂತ ಯಶಸ್ವಿಯಾಗಿ ಜರಗಿತು.
ವಿದ್ವಾಂಸರೊಬ್ಬರು ಇತ್ತೀಚಿಗೆ ಮಾಡಿದ ಹೇಳಿಕೆಯೊಂದನ್ನು ಉಲ್ಲೇಖಿಸಿ ಕಲಾವಿದರು ಇಂತಹ ಕ್ಷುಲ್ಲಕ ಮಾತುಗಳಿಗೆ ಅಧೀರರಾಗಬೇಕಿದ್ದಿಲ್ಲ, ಶತಮಾನಗಳಿಂದಲೂ ಸಮಾಜವನ್ನು ತಿದ್ದುವಲ್ಲಿ ಯಕ್ಷಗಾನ ಕಲೆ ಗಣನೀಯಪಾತ್ರ ವಹಿಸಿದೆ. ಯಕ್ಷಗಾನ ಕಲಾರಂಗ ಸಾಮಾಜಿಕ ಸಾಂಸ್ಕøತಿಕ ಕೆಲಸಗಳನ್ನು ಮಾಡುವ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು. ಶಾಸಕ ಯಶ್‍ಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಡಾ. ಜಿ. ಶಂಕರ್ ಪ್ರಶಸ್ತಿ ಪ್ರದಾನ ಮಾಡಿ ಯಕ್ಷಗಾನ ಕಲಾರಂಗದ ಸಾಧನೆಗೆ ಅಭಿನಂದಿಸಿದರು. ಎಂ. ರಾಘವೇಂದ್ರ ಭಟ್ ಶುಭಾಶಂಸನೆಗೈದರು. ಬಿ. ಆರ್. ವೆಂಕಟರಮಣ, ಹರೀಶ್ ರಾಯಸ್, ಡಾ. ಕಬ್ಯಾಡಿ ಹರಿರಾಮ ಆಚಾರ್ಯ, ಕೆ. ಮಹೇಶ್ ಉಡುಪ, ಡಾ. ಪಡಾರು ರಾಮಕೃಷ್ಣ ಶಾಸ್ತ್ರಿ ಅಭ್ಯಾಗತರಾಗಿ ಭಾಗವಹಿಸಿದ್ದರು. ಕಲಾವಿದರಾದ ಸುಬ್ರಹ್ಮಣ್ಯ ಚಿಟ್ಟಾಣಿ, ಕಕ್ಕುಂಜೆ ಗೋಪಾಲ ಬಳೆಗಾರ, ಕೊಡೇರಿ ಕೃಷ್ಣ, ಕಲ್ಲ್ಲಗುಡ್ಡೆ ಲಕ್ಷ್ಮಣ ಪೂಜಾರಿ, ರಾಧಾಕೃಷ್ಣ ಭಟ್ ಸೂರನಕೇರಿ, ಸುರೇಶ ಉಪ್ಪೂರು, ಕೃಷ್ಣಯ್ಯ ಬಿ. ಆಚಾರ್ ಬಿದ್ಕಲ್‍ಕಟ್ಟೆ, ಮನೋಹರ ರಾವ್ ಕೆ.ಜಿ, ಸೀತೂರು, ಪ್ರಭಾಕರ ಶೆಟ್ಟಿ ಮಡಾಮಕ್ಕಿ, ವಿಷ್ಣು ಮಂಜಪ್ಪ ಆಚಾರಿ, ಬಳಕೂರು ಲಕ್ಷ್ಮೀನಾರಾಯಣ ಸಂಪ, ಸಂಜೀವ ಶೆಟ್ಟಿ ಆಜ್ರಿಹರ, ಸುಣ್ಣಂಬಳ ವಿಶ್ವೇಶ್ವರ ಭಟ್, ಸುರೇಶ್ ರಾವ್ ಬಾರ್ಕೂರು, ಅಪ್ಪಯ್ಯ ಮಣಿಯಾಣಿ, ಕೃಷ್ಣಮೂರ್ತಿ ಉರಾಳ, ರಾಮ ಕೇಶವ ಗೌಡ ಗುಣವಂತೆ, ಕಡಬ ರಾಮಚಂದ್ರ ರೈ, ಉಮೇಶ ಮೊೈಲಿ ಮೂರುಕಾವೇರಿ, ಶಿವಣ್ಣ ಶೆಟ್ಟಿ ಸರಪಾಡಿ, ಮೋಹನ್ ನಾಯಕ್ ಕೂಜಳ್ಳಿ, ಬಲಿಪ ವಿಶ್ವೇಶ್ವರ ಭಟ್, ಮಹಾಬಲ ಭಟ್ ಭಾಗಮಂಡಲ, ಈ 23 ಕಲಾವಿದರನ್ನು ತಲಾ ರೂ. 20 ಸಾವಿರ ನಗದು ಸಹಿತ ಫಲಕ ನೀಡಿ ಸಂಮಾನಿಸಲಾಯಿತು.
ಯಕ್ಷ ಕಲಾ ಅಕಾಡೆಮಿ (ರಿ.), ಬೆಂಗಳೂರು ಸಂಸ್ಥೆಗೆ ಶ್ರೀ ವಿಶ್ವೇಶತೀರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ರೂ. 1,00,000/- ಮತ್ತು ಫಲಕವನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಕೆ. ಕೃಷ್ಣಮೂರ್ತಿ ತುಂಗರು ಪ್ರಶಸ್ತಿ ಸ್ವೀಕರಿಸಿದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರಿಗೆ ಬೆಳ್ಳಿಯ ಹರಿವಾಣದಲ್ಲಿ ಫಲವಸ್ತು ನೀಡಿ ‘ಯಕ್ಷ ಚೇತನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಇತ್ತೀಚಿಗೆ ನಿಧನರಾದ ಈಶ್ವರ ಗೌಡ ಇವರ ಕುಟುಂಬಕ್ಕೆ 50,000/- ರೂಪಾಯಿ ಸಾಂತ್ವನ ನಿಧಿಯನ್ನು ನೀಡಲಾಯಿತು. ಸಭೆಯಲ್ಲಿದ್ದ ಗಣ್ಯರು ಯಕ್ಷವಿದ್ಯಾಪೋಷಕ್ ಸಹಾಯಧನವನ್ನು ಯಕ್ಷಗಾನ ಕಲಾವಿದರ 62 ಮಕ್ಕಳಿಗೆ ರೂ. 7,11,500/- ಸಹಾಯಧನವನ್ನು ಸಾಂಕೇತಿಕವಾಗಿ ವಿತರಿಸಿದರು.
ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಎಸ್. ವಿ. ಭಟ್ ಮತ್ತು ಯು. ಎಸ್. ರಾಜಗೋಪಾಲ ಆಚಾರ್ಯ ಸ್ವಾಮೀಜಿಯವರಿಗೆ ಫಲ-ಪುಷ್ಪ ಸಮರ್ಪಿಸಿದರು. ಉಪಾಧ್ಯಕ್ಷರುಗಳಾದ ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ, ಹಿರಿಯ ಸದಸ್ಯರುಗಳಾದ ಕೆ. ಗಣೇಶ್ ರಾವ್, ಎಂ. ಎಲ್. ಸಾಮಗ, ವಿಜಯಕುಮಾರ್ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಸಂತೋಷ್ ಕುಮಾರ್ ಶೆಟ್ಟಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಜೊತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ ಪ್ರಶಸ್ತಿ ಪುರಸ್ಕøತ ಕಲಾವಿದರನ್ನು ಪರಿಚಯಿಸಿದರು. ವಿದ್ಯಾಪ್ರಸಾದ್ ವಿದ್ಯಾರ್ಥಿವೇತನ ಪಡೆದ ಕಲಾವಿದರ ಮಕ್ಕಳ ಹೆಸರನ್ನು ವಾಚಿಸಿದರು. ಕೋಶಾದಿಕಾರಿ ಪ್ರೊ. ಕೆ. ಸದಾಶಿವ ರಾವ್ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ಸಭೆಯ ಪೂರ್ವದಲ್ಲಿ ಸಂಸ್ಥೆಯ ಸದಸ್ಯ ಗಣೇಶ ಬ್ರಹ್ಮಾವರ ಸಂಯೋಜನೆಯಲ್ಲಿ ಬಡಗುತಿಟ್ಟು ಯಕ್ಷಗಾನ ತಾಮ್ರಧ್ವಜ ಕಾಳಗ ಜರಗಿತು.