













4.7.2025 ರಂದು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಶತಾವಧಾನಿ ಡಾ.ಆರ್. ಗಣೇಶರಿಗೆ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣೆಯಲ್ಲಿ ವಿದ್ವಾಂಸರಿಗೆ ನೀಡಲಾಗುವ, 60000 ರೂ. ನಗದನ್ನೊಳಗೊಂಡ “ಯಕ್ಷಗಾನ ಕಲಾರಂಗ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಲಕ್ಷ್ಮೀಶ ತೋಳ್ಪಾಡಿ ವಹಿಸಿದ್ದು,ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಅಭಿನಂದನಾ ಭಾಷಣ ಮಾಡಿದರು.ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು.ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪವನ್ನು ಇದೇ ಸಂದರ್ಭದಲ್ಲಿ ನೆರವೇರಿಸಲ್ಪಟ್ಟಿತು. ಪವನ್ ಕಿರಣ್ಕೆರೆ, ಶಿಬಿರದ ಬಗ್ಗೆ ಮಾತನಾಡಿದರು.ಶಿಬಿರಾರ್ತಿಗಳ ಪರವಾಗಿ ಶಶಿಕಾಂತ್ ಶೆಟ್ಟಿ, ಸುನಿಲ್ ಹೊಲ್ನಾಡು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಮುರಲಿ ಕಡೆಕಾರ್ ನಿರ್ವಹಿಸಿದ ಕಾರ್ಯಕ್ರಮದ ಕೊನೆಯಲ್ಲಿ ನಾರಾಯಣ ಎಂ .ಹೆಗಡೆ ಧನ್ಯವಾದ ಸಮರ್ಪಿಸಿದರು.ಗಿರಿಜಾ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.ವಿದ್ಯಾಪ್ರಸಾದ್ ಸಹಕರಿಸಿದರು. ಇಂದು ಪೂರ್ವಾಹ್ನ ಡಾ.ಅನ್ನಪೂರ್ಣ ಆಚಾರ್ಯರಿಂದ ಯೋಗ ಮತ್ತು ಕಾರ್ಯದರ್ಶಿಯಿಂದ ಕಲಾರಂಗದ ಬೆಳವಣಿಗೆ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲ್ಪಟ್ಟಿತು.ಬಳಿಕ ಎರಡೂವರೆ ಗಂಟೆಗಳ ಕಾಲ ಶತಾವಧಾನಿಗಳೊಂದಿಗೆ ಅರ್ಥಪೂರ್ಣ ಸಂವಾದ ನಡೆಯಿತು. ಊಟದ ಬಳಿಕ ವಾಸುದೇವರಂಗ ಭಟ್ ಮಾತನಾಡಿದರು.ಬಳಿಕ ಎಲ್ಲ ಕಲಾವಿದರು ಶಿಬಿರದ ತಮ್ಮ ಅನುಭವಗಳನ್ನು ಹಂಚಿಕೊಂಡರು.