










ಯಕ್ಷಗಾನ ಕಲಾರಂಗದ 63ನೇ ಮನೆಯ ಉದ್ಘಾಟನೆ.
30-01-2025ರಂದು ಬೈಂದೂರು ತಾಲೂಕಿನ ಅರೆಶಿರೂರಿನ ವಿದ್ಯಾ ಪೋಷಕ್ ವಿದ್ಯಾರ್ಥಿಗಳಾದ, ದ್ವಿತೀಯ ಪಿಯುಸಿ ಓದುತ್ತಿರುವ ರಶ್ಮಿತಾ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿ ರಕ್ಷತ್ ಇವರಿಗೆ ಉಡುಪಿ ಗೋಪಾಲಪುರದ ಉದ್ಯಮಿಗಳಾದ ಅರವಿಂದ ಆರ್. ನಾಯಕ್ ಇವರು ತಮ್ಮ ಮಾವ ರೈತಬಂಧು ಶಿವಪುರ ಸುಬ್ಬಣ್ಣ ನಾಯಕ್ ಸ್ಮರಣಾರ್ಥ ಮತ್ತು ಅತ್ತೆ ಇಂದಿರಾ ಎಸ್. ನಾಯಕ್ ಇವರ ಗೌರವಾರ್ಥ ನಿರ್ಮಿಸಿದ 63ನೇ ಮನೆ “ಇಂದಿರಾ ನಿಲಯ”ವನ್ನು ಶ್ರೀಮತಿ ಇಂದಿರಾ ಎಸ್. ನಾಯಕ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷ ಸ್ಥಾನವಹಿಸಿದ ಬೈಂದೂರು ಶಾಸಕರಾದ ಗುರುರಾಜ ಗಂಟಿಹೊಳೆಯವರು ಮಾತನಾಡಿ, ವಿದ್ಯಾರ್ಥಿಗಳ ಮನೆಗೆ ತೆರಳಿ ಅವರ ಆರ್ಥಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡಿ ಶಿಕ್ಷಣಕ್ಕೆ ಪೂರಕವಾದ ಸರ್ವನೆರವು ನೀಡುವ ಕಲಾರಂಗದ ಕಾರ್ಯಕರ್ತರ ಪರಿಶ್ರಮ, ಯೋಜನೆ ಅಪೂರ್ವವಾದದ್ದು. ಬೈಂದೂರು ಕ್ಷೇತ್ರದ ಸಾವಿರಾರು ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಿರುವುದು ಹೆಮ್ಮೆಪಡುವ ವಿಚಾರ ಎಂದು ಸಂಸ್ಥೆಯನ್ನು ಅಭಿನಂದಿಸಿದರು. ಗಳಿಕೆಯ ಒಂದು ಅಂಶವನ್ನು ಸಮಾಜಕ್ಕೆ ನೀಡಬೇಕೆಂಬುದು ನನ್ನ ಮಾವ ಸುಬ್ಬಣ್ಣ ನಾಯಕರ ಆಶಯವಾಗಿತ್ತು. ಅದಕ್ಕಣುಗುಣವಾಗಿ, ಸಮಾಜದ ವಿಶ್ವಾಸಾರ್ಹತೆಗಳಿಸಿದ ಯಕ್ಷಗಾನ ಕಲಾರಂಗದ ಮೂಲಕ ಈ ಅರ್ಹ ಕುಟುಂಬಕ್ಕೆ ಗೃಹ ನಿರ್ಮಾಣ ಮಾಡುವ ಅವಕಾಶ ಲಭಿಸಿದ್ದು, ನಮ್ಮ ಇಡೀ ಕುಟುಂಬಕ್ಕೆ ಸಂತಸವನ್ನುಂಟು ಮಾಡಿದೆ ಎಂಬುದಾಗಿ ದಾನಿಗಳಾದ ಅರವಿಂದ ಆರ್. ನಾಯಕ್ ನುಡಿದರು. ಬೆಳ್ತಂಗಡಿಯ ರೈತಬಂಧು ಆಹಾರ ಉದ್ಯಮದ ನಿರ್ದೇಶಕರಾದ ಜಗದೀಶ್ ಎಸ್. ನಾಯಕ್ ಶುಭಾಶಂಸನೆಗೈದರು. ಪೂರ್ಣಿಮಾ ಎ. ನಾಯಕ್, ಕಿರಣ್ ಎ. ನಾಯಕ್, ಪವಿತ್ರಾ ಪ್ರಭು, ಸುಮಾ ಜೆ. ನಾಯಕ್, ನಿರಂಜನ್ ಜೆ. ನಾಯಕ್, ಅನಿತಾ ಎನ್. ನಾಯಕ್, ವಿಹಾ ಎನ್. ನಾಯಕ್, ಶಿವಶಂಕರ್ ಎಸ್. ನಾಯಕ್, ಉಮಾ ಎಸ್. ನಾಯಕ್, ಆದಿತ್ಯ ಎಸ್. ನಾಯಕ್, ಪಿ.ಕೃಷ್ಣಾನಂದ ನಾಯಕ್, ಸುರೇಖಾ ಕೆ. ನಾಯಕ್, ರಘುನಾಥ ಪ್ರಭು ಅಭ್ಯಾಗತರಾಗಿ ಪಾಲ್ಗೊಂಡರು. ಮೂಕಾಂಬಿಕಾ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಶಿವರಾಮ ಭಟ್, ಯಕ್ಷಗಾನ ಕಲಾರಂಗದ ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ವಿಜಯಕುಮಾರ್ ಮುದ್ರಾಡಿ, ದಿನೇಶ್ ಪಿ. ಪೂಜಾರಿ, ಕಿಶೋರ್, ನರಸಿಂಹ ಮಧ್ಯಸ್ಥ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶಿವರಾಜ ಪೂಜಾರಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್ ರಾವ್ ಸ್ವಾಗತಿಸಿದ ಕಾರ್ಯಕ್ರಮವನ್ನು ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸಿದರು. ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಧನ್ಯವಾದ ಸಮರ್ಪಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು.