![](https://yakshaganakalaranga.com/wp-content/uploads/2025/01/Parappady-Inaugration-photo-1024x683.jpg)
![](https://yakshaganakalaranga.com/wp-content/uploads/2025/01/Parappady-Inaugration-photo-1-1024x683.jpg)
![](https://yakshaganakalaranga.com/wp-content/uploads/2025/01/063-Prappady-Prashanth-house-04.01.2025-1024x683.jpg)
![](https://yakshaganakalaranga.com/wp-content/uploads/2025/01/064-Prappady-Prashanth-house-04.01.2025-1024x683.jpg)
![](https://yakshaganakalaranga.com/wp-content/uploads/2025/01/097-Prappady-Prashanth-house-04.01.2025-1024x683.jpg)
![](https://yakshaganakalaranga.com/wp-content/uploads/2025/01/Parappady-Inaugration-photo-2-1024x683.jpg)
![](https://yakshaganakalaranga.com/wp-content/uploads/2025/01/102-Prappady-Prashanth-house-04.01.2025-1024x683.jpg)
ಯಕ್ಷಗಾನ ಕಲಾರಂಗ ಕಾರ್ಕಳದ ಪರಪ್ಪಾಡಿಯಲ್ಲಿ ವಿದ್ಯಾಪೋಷಕ್ ನ ಪ್ರಥಮ ಪಿ.ಯು. ವಿದ್ಯಾರ್ಥಿ ಪ್ರಶಾಂತನಿಗೆ ನಿರ್ಮಿಸಿದ ಮನೆಯ ಪ್ರಾಯೋಜಕತ್ವ ವಹಿಸಿ, ತನ್ನ ಪತ್ನಿಯ ನೆನಪಿಗೆ ಸಮರ್ಪಿಸಿದ, ಸುರತ್ಕಲ್ ನ ಕುಮಾರಚಂದ್ರ ರಾವ್ ‘ಜಯಲಕ್ಷ್ಮಿ’ ಮನೆಯನ್ನು 04.01.2025 ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಪರೋಪಕಾರಿಯಾಗಿ ಬಾಳಿದ ನನ್ನ ಮಡದಿ, ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದ್ದಳು. ಈ ಮನೆ ನಿರ್ಮಿಸುವ ಮೂಲಕ ಆಕೆಯ ಸಂಕಲ್ಪ ನೆರವೇರಿಸಿದಂತಾಯಿತು ಎಂದು ಈ ಸಂದರ್ಭದಲ್ಲಿ ನುಡಿದರು. ಅಧ್ಯಕ್ಷತೆ ವಹಿಸಿದ್ದ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಕಲಾರಂಗದ ಕಾರ್ಯಕರ್ತರ ತಂಡ ಮೌನವಾಗಿ ಮಾಡುತ್ತಿರುವ ಕೆಲಸಗಳು ಸಾಮಾಜಿಕ ಸಂಘಟನೆಗಳಿಗೆ ಮಾದರಿಯಾಗಿವೆ ಎಂದರು. ಕುಮಾರ ಚಂದ್ರರ ಸಹೋದರ, ನಿವೃತ್ತ ಮುಖ್ಯೋಪಾಧ್ಯಾಯರು, ಶ್ರೇಷ್ಠ ಗಮಿಕಿಗಳೂ ಆಗಿದ್ದ ಪಿ.ಸಿ.ವಾಸುದೇವ ರಾವ್ ಅವರ ಪುತ್ರಿಯರಾದ ಸುಮಂಗಲಾ ಆರ್.ರಾವ್, ಸುಭದ್ರಾ ರಾವ್ ಮತ್ತು ಅಳಿಯಂದಿರಾದ ರಘುಪತಿ ರಾವ್, ರವಿರಾಜ್ ರಾವ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಕಲಾರಂಗದ ಉಪಾಧ್ಯಕ್ಷ ಎಸ್. ವಿ. ಭಟ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ವಿಜಯ ಕುಮಾರ್ ಮುದ್ರಾಡಿ, ಎ. ಅನಂತರಾಜ ಉಪಾಧ್ಯ, ನಟರಾಜ ಉಪಾಧ್ಯಾಯ, ವಿದ್ಯಾಪ್ರಸಾದ್, ದಿನೇಶ ಪೂಜಾರಿ, ಅಶೋಕ ಎಂ, ಅಜಿತ್ ಕುಮಾರ್, ಗಣೇಶ ಬ್ರಹ್ಮಾವರ, ದಾನಿಗಳಾದ ಚಂದ್ರಕಲಾ ಎಂ. ರಾವ್, ವೈಜಯಂತಿ ಕಾಮತ್ ಮತ್ತು ಪಂಚಾಯತ್ ಅಧ್ಯಕ್ಷರಾದ ಅಶೋಕ ಪೂಜಾರಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ್ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.