19-12-2024 ರಂದು ಬಿದ್ಕಲ್ ಕಟ್ಟೆಯ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ವಠಾರದಲ್ಲಿ ಕಿಶೋರ ಯಕ್ಷಗಾನ ಸಂಭ್ರಮವನ್ನು ಉದ್ಯಮಿಗಳಾದ ಎಚ್. ಶಂಕರ್ ಹೆಗ್ಡೆ, ಜನ್ನಾಡಿ ಇವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಪ್ರದರ್ಶನ ಸಂಘಟನಾ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ಇಂಜಿನಿಯರ್, ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ್ ರಾವ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದೀಪಾ ಶೆಟ್ಟಿ, ಹಾಲಾಡಿ ವಲಯ ಭಜನಾ ಮಂಡಳಿಗಳ ಅಧ್ಯಕ್ಷರಾದ ಶ್ರೀಮತಿ ಸುಶೀಲಾ ಬಿ. ಶೆಟ್ಟಿ, ಪಂಚಾಯತ್ ಪಿ.ಡಿ.ಒ. ಶ್ರೀಮತಿ ರೇಖಾ ಅಭ್ಯಾಗತರಾಗಿ ಭಾಗವಹಿಸಿದರು. ಪ್ರದರ್ಶನ ಸಂಘಟನಾ ಸಮಿತಿಯ ಸಂಚಾಲಕರಾದ ಜಯಪ್ರಕಾಶ್ ಶೆಟ್ಟಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಮುರಲಿ ಕಡೆಕಾರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳಲ್ಲಿ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರ ಕಲಾಪ್ರೀತಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದರು. ಟ್ರಸ್ಟಿನ ಕೋಶಾಧಿಕಾರಿ ಎಚ್. ಎನ್. ಶೃಂಗೇಶ್ವರ ಧನ್ಯವಾದ ಸಲ್ಲಿಸಿದರು. ಬಳಿಕ ಸರಕಾರಿ ಪ್ರೌಢಶಾಲೆ, ಬೇಳೂರು ಇದರ ವಿದ್ಯಾರ್ಥಿಗಳಿಂದ ಸ್ಕಂದ ಇವರ ನಿರ್ದೇಶನದಲ್ಲಿ ಚಕ್ರವ್ಯೂಹ ಮತ್ತು ಸರಕಾರಿ ಪ್ರೌಢಶಾಲೆ ಹೆಸ್ಕುತ್ತೂರು ಇದರ ವಿದ್ಯಾರ್ಥಿಗಳಿಂದ, ಮಂಜುನಾಥ್ ಕುಲಾಲ್ ಇವರ ನಿರ್ದೇಶನದಲ್ಲಿ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.
ಕಿಶೋರ ಯಕ್ಷಗಾನ ಸಂಭ್ರಮ 2024ರ ಸಮಾರೋಪದಲ್ಲಿ : ಶಾಸಕ ಕಿರಣ್ ಕುಮಾರ್ ಕೊಡ್ಗಿ
22.12.2024ರಂದು ಬಿದ್ಕಲ್ ಕಟ್ಟೆಯ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯಿತಿನ ಆವರಣದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ, ಪ್ರದರ್ಶನ ಸಂಘಟನಾ ಸಮಿತಿಯ ಬಿದ್ಕಲ್ ಕಟ್ಟೆ ಇವರ ಸಹಯೋಗದಲ್ಲಿ ಆಯೋಜಿಸಲಾದ, ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಿಕೆಯು ವಿದ್ಯಾರ್ಥಿಗಳನ್ನು ಅವರ ಸಂಸ್ಕøತಿಯಲ್ಲಿ ಬೆಸೆಯಲು ಸಹಕಾರಿಯಾಗಿದೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಪ್ರದರ್ಶನ ಸಂಘಟನಾ ಸಮಿತಿಯ ಗೌರವ ಅಧ್ಯಕ್ಷರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿದರು. ಇದೆ ವೇಳೆ ಸ್ವಯಂ ಸೇವಕರಾಗಿ ಗುರುತಿಸಿ ಕೊಂಡಿರುವ ರಂಜಿತ್ ಮೊಗವೀರ ಇವರಿಗೆ ಸನ್ಮಾನಿಸಲಾಯಿತು. ನಿರಂತರ ನಾಲ್ಕು ದಿವಸಗಳ ಕಾಲ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಆಯೋಜಿಸಲಾದ ಯಕ್ಷಗಾನದ ವಿಚಾರದ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಪ್ರದರ್ಶನ ಸಂಘಟನಾ ಸಮಿತಿಯಿಂದ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ ಗ್ರಾಮ ಪಂಚಾಯಿತಿ ನವರಿಗೆ ಕೃತಜ್ಞತೆ ಸಲ್ಲಿಸಲಾಯಿತು. ತದನಂತರ ಪ್ರಸಾದ್ ಕುಮಾರ್ ಮೊಗೆಬೆಟ್ಟು, ಮಂಜುನಾಥ್ ಕುಲಾಲ್ ಐರೋಡಿ, ಇವರ ಸಂಯೋಜನೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಡಾಡಿ ಮತ್ಯಾಡಿ ವಿದ್ಯಾರ್ಥಿಗಳಿಂದ ಕುಶಲವ ಕಾಳಗ, ಸರಕಾರಿ ಪದವಿ ಪೂರ್ವ ಕಾಲೇಜು ಬಿದ್ಕಲ್ ಕಟ್ಟೆ ವಿದ್ಯಾರ್ಥಿಗಳಿಂದ ಯಕ್ಷೋತ್ತಮ ಕಾಳಗ ವೆಂಬ ಪೌರಾಣಿಕ ಯಕ್ಷಗಾನ ನೆರವೇರಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರುಗಳಾದ ಎಸ್.ವಿ.ಭಟ್, ವಿ.ಜಿ ಶೆಟ್ಟಿ ಸದಸ್ಯರಾದ ಯು. ಎಸ್. ರಾಜಗೋಪಾಲ ಆಚಾರ್ಯ, ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್, ಬಿದ್ಕಲ್ ಕಟ್ಟೆ ಪ್ರದರ್ಶನ ಸಂಘಟನಾ ಸಮಿತಿ ಅಧ್ಯಕ್ಷ ಪ್ರಶಾಂತ್ ಇಂಜಿನಿಯರ್ ಮೊಳಹಳ್ಳಿ, ಸಂಘಟನಾ ಸಮಿತಿ ಸದಸ್ಯರಾದ ದಯಾನಂದ ಬಾಸ್ ಬೈಲು, ದೀನ್‍ಪಾಲ್ ಶೆಟ್ಟಿ ಮೊಳಹಳ್ಳಿ, ಜಯಪ್ರಕಾಶ್ ಶೆಟ್ಟಿ ಚಿಟ್ಟೆಬೈಲು ಉಪಸ್ಥಿತರಿದ್ದರು