![](https://yakshaganakalaranga.com/wp-content/uploads/2024/12/GSS_6809-1024x683.jpg)
![](https://yakshaganakalaranga.com/wp-content/uploads/2024/12/GSS_6813-1024x683.jpg)
![](https://yakshaganakalaranga.com/wp-content/uploads/2024/12/GSS_6818-1024x683.jpg)
![](https://yakshaganakalaranga.com/wp-content/uploads/2024/12/GSS_6823-1024x683.jpg)
![](https://yakshaganakalaranga.com/wp-content/uploads/2024/12/GSS_6840-1024x683.jpg)
![](https://yakshaganakalaranga.com/wp-content/uploads/2024/12/GSS_6842-1024x683.jpg)
![](https://yakshaganakalaranga.com/wp-content/uploads/2024/12/GSS_6844-1024x683.jpg)
![](https://yakshaganakalaranga.com/wp-content/uploads/2024/12/GSS_6846-1024x683.jpg)
![](https://yakshaganakalaranga.com/wp-content/uploads/2024/12/GSS_6848-1024x683.jpg)
![](https://yakshaganakalaranga.com/wp-content/uploads/2024/12/GSS_6854-1024x683.jpg)
![](https://yakshaganakalaranga.com/wp-content/uploads/2024/12/GSS_6860-1024x683.jpg)
![](https://yakshaganakalaranga.com/wp-content/uploads/2024/12/GSS_6862-1024x683.jpg)
![](https://yakshaganakalaranga.com/wp-content/uploads/2024/12/GSS_6870-1024x683.jpg)
![](https://yakshaganakalaranga.com/wp-content/uploads/2024/12/GSS_6871-1024x683.jpg)
ಸುವರ್ಣ ವರ್ಷವನ್ನು ಆಚರಿಸುತ್ತಿರುವ, ಉಡುಪಿಯ ಯಕ್ಷಗಾನ ಕಲಾರಂಗದ ವಿದ್ಯಾ ಪೋಷಕ್ನ ದ್ವಿತೀಯ ಪಿ.ಯು.ಸಿ.ಯ ವಿದ್ಯಾರ್ಥಿನಿ ಪ್ರಮಿತಾ ಇವಳಿಗೆ ಕುಂದಾಪುರ ತಾಲೂಕಿನ ಮೂಡುಮುಂದದ ಬೆಳ್ಳಾಲದಲ್ಲಿ ಶ್ರೀಮತಿ ಜಯಲಕ್ಷ್ಮೀ ಮತ್ತು ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಎ.ಜಿ.ಎಂ.ಶ್ರೀ ಅಶೋಕ್ ನಾಯಕ್ ಇವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ 60ನೆಯ ಮನೆ ‘ಲಕ್ಷ್ಮೀ ಕುಟೀರ’ 17-12-2024 ರಂದು ಉದ್ಘಾಟನೆಗೊಂಡಿತು. ಅಶೋಕ್ ನಾಯಕ್ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ನಾಯಕರು, ಇಂದು ನನ್ನ ಮಡದಿಯ 68ನೇ ಜನ್ಮದಿನ. ಅಲ್ಲದೆ ತನಗೆ 70 ವರ್ಷ ಪೂರ್ತಿಗೊಂಡ ಈ ಸಂದರ್ಭದಲ್ಲಿ, ಅರ್ಹ ವಿದ್ಯಾರ್ಥಿನಿಗೆ ಮನೆ ನಿರ್ಮಿಸಿಕೊಟ್ಟು ಸಾರ್ಥಕವಾಗಿ ಆಚರಿಸಿದ ಭಾವ ನಮ್ಮಲ್ಲಿ ಉಂಟಾಗಿದೆ. ಪ್ರಮಿತಾಳು ಸತತ ಅಭ್ಯಾಸದ ಮೂಲಕ ಉತ್ತಮ ಸಾಧನೆ ಮಾಡಲಿ, ಅದುವೇ ನಮ್ಮ ಶುಭ ಹಾರೈಕೆಗಳು ಎಂದು ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಶೋಕ್ ನಾಯಕರ ಸ್ನೇಹಿತರು, ಸಂಸ್ಥೆಯ ಮಹಾದಾನಿಗಳೂ ಆದ ಪರ್ಕಳ ಸದಾನಂದ ಶೆಣೈ ಮತ್ತು ಸಹನಾ ಶೆಣೈ ದಂಪತಿಗಳು ಭಾಗವಹಿಸಿದ್ದರು. ಯು. ವಿಶ್ವನಾಥ್ ಶೆಣೈ, ಎಸ್.ವಿ.ಭಟ್, ಕೆ. ಸದಾಶಿವ ರಾವ್, ವಿಜಯಕುಮಾರ್ ಮುದ್ರಾಡಿ, ಅನಂತರಾಜ ಉಪಾಧ್ಯಾಯ, ಗಣೇಶ್ ಬ್ರಹ್ಮಾವರ, ಕಿಶೋರ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಮ್. ಹೆಗಡೆ ವಂದಿಸಿದರು. ಎಚ್.ಎನ್.ಶೃಂಗೇಶ್ವರ ಸಹಕರಿಸಿದರು.