ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರ ಆಶಯದಂತೆ,ಕಾಪು ವಿಧಾನ ಸಭಾ ವ್ಯಾಪ್ತಿಯ ಮೂರು ಶಾಲೆಗಳ ಪ್ರದರ್ಶನಗಳು ಹಿರಿಯಡಕ ವೀರಭದ್ರ ದೇವಳದ ವಠಾರದಲ್ಲಿ ನಡೆಯಲಿದ್ದು ರಂದು 18.12.24 ಬಹು ಮೇಳಗಳ ಯಜಮಾನರಾದ ಪಿ. ಕಿಶನ್ ಹೆಗ್ಡೆಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಉದ್ಯಮಿ ನಟರಾಜ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಪೋಷಕ ಶ್ರೀನಿವಾಸ ರಾವ್,ಪ್ರಾಯೋಜಕರಾದ ವೈದಿಕರಾದ ಸ್ಕಂದ ಗಂಪು ಸುಬ್ರಹ್ಮಣ್ಯ ಆಚಾರ್ಯ ಮತ್ತು ಸೆಲ್ಕೊದ ಸುಬ್ರಹ್ಮಣ್ಯರು ಅಭ್ಯಾಗತರಾಗಿ ಭಾಗವಹಿಸಿದ್ದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಯು. ಎಸ್. ರಾಜಗೋಪಾಲ ಆಚಾರ್ಯ, ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು. ಯಕ್ಷಶಿಕ್ಷಣ ಟ್ರಸ್ಟ್ ನ ವಿಶ್ವಸ್ಥ ವಿ. ಜಿ ಶೆಟ್ಟಿ ಸ್ವಾಗತಿಸಿದರು. ಎಚ್. ಎನ್. ವೆಂಕಟೇಶ್ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಅನಂತರ ಯು. ಎಸ್. ನಾಯಕ್ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಂದ ಸರೇಶ ಮರ್ಣೆ ನಿರ್ದೇಶನದ ಕಂಸ ದಿಗ್ವಿಜಯ ಮತ್ತು ಪಟ್ಲದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಸುಬ್ರಹ್ಮಣ್ಯ ಪ್ರಸಾದ ಮುದ್ರಾಡಿ ನಿರ್ದೇಶನದ ವೀರಮಣಿ ಕಾಳಗ ಪ್ರಸಂಗಗಳು ಪ್ರದರ್ಶಗೊಂಡವು.
ಹಿರಿಯಡಕದ ಕಿಶೋರ ಯಕ್ಷಗಾನ ಸಂಭ್ರಮ ಸಮಾರೋಪ
ಕಾಪು ವಿಧಾನ ಸಭಾ ವ್ಯಾಪ್ತಿಯ ಮೂರು ಶಾಲೆಗಳ ಪ್ರದರ್ಶನ ಹಿರಿಯಡಕ ವೀರಭದ್ರ ದೇವಳದ ವಠಾರದಲ್ಲಿ ನಡೆದಿದ್ದು ಅದರ ಸಮಾರೋಪ ಸಮಾರಂಭ ರಂದು 19.12.24 ಜರಗಿತು. ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಬಾಗಲ ಕೋಟೆಯ ಹರೀಶ್ ಮತ್ತುಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದ ವಿದ್ಯಾರ್ಥಿ ಶ್ರೀವತ್ಸ ತಮ್ಮ ಅನುಭವ ಹಂಚಿಕೊಂಡರು. ಶಾಲಾ ಮುಖ್ಯೋಪಾಧ್ಯಾಯರಿಗೆ ಪ್ರಮಾಣಪತ್ರ ಗುಂಪು ಛಾಯಾಚಿತ್ರ ವಿತರಿಸಲಾಯಿತು. ಅಭ್ಯಾಗತರಾಗಿ ಭಾಗವಹಿಸಿದ್ದ ದೇವಳದ ಅರ್ಚಕ ರಂಗನಾಥ ಭಟ್, ಪ್ರಾಂಶುಪಾಲ ಮಂಜುನಾಥ ಭಟ್, ನಿವೃತ್ತ ಅಧ್ಯಾಪಕ ಅನಂತ ಭಟ್, ಉದ್ಯಮಿ ಶ್ರೀನಿವಾಸ ರಾವ್ ಯಕ್ಷಗಾನದ ಮಹತ್ವ ತಿಳಿಸಿ ಯಕ್ಷಶಿಕ್ಷಣ ಟ್ರಸ್ಟ್ ಮತ್ತು ಕಲಾರಂಗದ ಅಗಾಧ ಕಾರ್ಯವಿಸ್ತಾರವನ್ನು ಶ್ಲಾಘಿಸಿದರು. ಉದ್ಯಮಿ ವಿಶ್ವನಾಥ ಸೇರೀಗಾರ್, ಎಸ್. ಡಿ. ಎಂ. ಸಿ ಸದಸ್ಯ ಸುಬ್ರಹಮಣ್ಯ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಡಾ. ರಾಜೇಶ ನಾವಡ ಸ್ವಾಗತಿಸಿ, ನಾಗರಾಜ ಹೆಗಡೆ ವಂದಿಸಿದರು. ಟ್ರಸ್ಟಿ ನಾರಾಯಣ ಎಂ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕ ಇಲ್ಲಿಯ ವಿದ್ಯಾರ್ಥಿಗಳಿಂದ ಸುಬ್ರಹ್ಮಣ್ಯ ಪ್ರಸಾದ ಮುದ್ರಾಡಿ ನಿರ್ದೇಶನದ ರತಿ ಕಲ್ಯಾಣ ಪ್ರಸ್ತುತಗೊಂಡಿತು.