ಕಿಶೋರ ಯಕ್ಷಗಾನ ಸಂಭ್ರಮ 2024 ಮಹಾಭಿಯಾನ 23.11.2024 ರಂದು ಬ್ರಹ್ಮಾವರದಲ್ಲಿ ಉದ್ಘಾಟನೆಗೊಂಡಿತು. ಉಡುಪಿ ಶಾಸಕರು, ಯಕ್ಷಶಿಕ್ಷಣ ಟ್ರಸ್ಟಿನ ಅಧ್ಯಕ್ಷರೂ ಆದ ಯಶ್ ಪಾಲ್ ಸುವರ್ಣರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.ರಘುರಾಮ ಮಧ್ಯಸ್ಥ,ಬೈಕಾಡಿ ಸುಪ್ರಸಾದ್ ಶೆಟ್ಟಿ,ಬಿ.ಭುಜಂಗ ಶೆಟ್ಟಿ, ಧನಂಜಯ ಅಮೀನ್,ಬಿ.ಎನ್.ಶಂಕರ ಪೂಜಾರಿ,ಮಾರಾಳಿ ಪ್ರತಾಪ್ ಹೆಗ್ಡೆ,ರಾಜೀವ್ ಕುಲಾಲ್, ನಿತ್ಯಾನಂದ ಬಿ.ಆರ್ ಭಾಗವಹಿಸಿದ ಸಮಾರಂಭದ ಆರಂಭದಲ್ಲಿ ಬ್ರಹ್ಮಾವರ ಪ್ರದರ್ಶನ ಸಂಘಟನಾ ಸಮಿತಿಯ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಗಣೇಶ್ ಬ್ರಹ್ಮಾವರ ನಿರ್ವಸಿದ ಕಾರ್ಯಕ್ರಮದ ಕೊನೆಯಲ್ಲಿ ಎಚ್.ಎನ್.ಶೃಂಗೇಶ್ವರ ಧನ್ಯವಾದ ಸಲ್ಲಿಸಿದರು.ಯಕ್ಷಗಾನ ಕಲಾರಂಗದ ಕಾರ್ಯಕಾರ್ತರಾದ ಯು.ಎಸ್.ರಾಜಗೋಪಾಲ ಆಚಾರ್ಯ, ಕೆ.ಆನಂದ ಶೆಟ್ಟಿ ಉಪಸ್ಥಿತರಿದ್ದರು. ಸಭೆಯ ಬಳಿಕ ನಿರ್ಮಲ ಇಂಗ್ಲಿಷ್ ಮೀಡಿಯಂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ, ಮಂಜುನಾಥ್ ಕುಲಾಲ್ ನಿರ್ದೇಶನದಲ್ಲಿ ಚಕ್ರವ್ಯೂಹ ಯಕ್ಷಗಾನ ಪ್ರದರ್ಶನಗೊಂಡಿತು.ಡಿಸೆಂಬರ್ 31 ರ ತನಕ ಉಡುಪಿ,ಕಾಪು,ಕುಂದಾಪುರ, ಬೈಂದೂರು ವಿಧಾನಸಭಾ ಕ್ಷೇತ್ರದ 91 ಪ್ರೌಢಶಾಲೆಗಳ ಪ್ರದರ್ಶನಗಳು 11 ಕಡೆಯಲ್ಲಿ ಜರುಗಲಿದೆ.
ಬ್ರಹ್ಮಾವರ ಕಿಶೋರ ಯಕ್ಷಗಾನ ಸಮಾರೋಪ
ಉಡುಪಿ : ಬ್ರಹ್ಮಾವರ ಬಂಟರ ಭವನದ ಮುಂಭಾಗದಲ್ಲಿ ಒಂದು ವಾರ ಪರ್ಯಂತ 13 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ನಡೆದ ಯಕ್ಷಗಾನ ಪ್ರದರ್ಶನ ನವೆಂಬರ್ 29, 2024 ಶುಕ್ರವಾರದಂದು ಸಮಾಪನಗೊಂಡಿತು. 143 ಹುಡುಗರು, 290 ಹುಡುಗಿಯರು ಒಟ್ಟು 433 ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 20 ಹೊರ ಜಿಲ್ಲೆ, 2 ಹೊರ ರಾಜ್ಯ ಹಾಗೂ 2 ಕ್ರಿಶ್ಚಿಯನ್ ಆಗಿದ್ದರು. ಈ ಸಂದರ್ಭದಲ್ಲಿ ಪಾಲುಗೊಂಡ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳ ಪ್ರಮಾಣ ಪತ್ರ, ಗುಂಪು ಫೋಟೊ ಹಾಗೂ ಪ್ರೊ. ಬಿ. ವಿ. ಆಚಾರ್ಯ ಕುರಿತ ‘ಸೇವಾ ಸಿಂಧು’ ಪುಸ್ತಕ ಸ್ಮರಣಿಕೆಯನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ನೀಡಲಾಯಿತು. ಯಕ್ಷಗಾನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ದೀಕ್ಷಾ, ಶ್ರಾವ್ಯಾ, ಸ್ವಸ್ತಿಕ್, ತನುಷ್, ಚಿನ್ಮಯಿ ಹಾಗೂ ಪ್ರಸ್ತುತ ನೀಲಾವರ ಮೇಳದ ವೃತ್ತಿ ಕಲಾವಿದನಾಗಿ ಸೇರ್ಪಡೆಗೊಂಡ ಯಕ್ಷಶಿಕ್ಷಣದ ಹಳೆಯ ವಿದ್ಯಾರ್ಥಿ ಸುಜನ್ ಕುಮಾರ್ ತಮ್ಮ ಅನುಭವಗಳನ್ನು ಹೇಳಿಕೊಂಡರು.
ವೇದಿಕೆಯಲ್ಲಿ ಅಭ್ಯಾಗತರಾಗಿ ಆರೂರು ತಿಮ್ಮಪ್ಪ ಶೆಟ್ಟಿ, ಎಂ. ಗಂಗಾಧರ ರಾವ್, ರಾಜು ಕುಲಾಲ್, ಟಿ. ಭಾಸ್ಕರ ರೈ, ಧನಂಜಯ್ ಅಮೀನ್, ಜ್ಞಾನ ವಸಂತ್ ಶೆಟ್ಟಿ, ಆರೂರು ಶ್ರೀಧರ ಶೆಟ್ಟಿ, ರವಿ ಶೆಟ್ಟಿ ಕುಮ್ರಗೋಡು ಭಾಗವಹಿಸಿದ್ದರು. ಆರಂಭದಲ್ಲಿ ಪ್ರದರ್ಶನ ಸಂಘಟನಾ ಸಮಿತಿಯ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಯಕ್ಷಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘಟನಾ ಸಮಿತಿಯ ಕಾರ್ಯದರ್ಶಿ ಉದಯ ಪೂಜಾರಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಗಣೇಶ್ ಬ್ರಹ್ಮಾವರ ಧನ್ಯವಾದ ಸಮರ್ಪಿಸಿದರು. ಟ್ರಸ್ಟ್ ನ ವಿಶ್ವಸ್ಥರಾದ ನಾರಾಯಣ ಎಂ. ಹೆಗಡೆ, ಹಾಗೂ ಕೋಶಾಧಿಕಾರಿ ಎಚ್. ಎನ್. ಶೃಂಗೇಶ್ವರ ಸಹಕರಿಸಿದರು.