ಉಡುಪಿಯ ನಿಟ್ಟೂರು ಪ್ರೌಢಶಾಲೆಯಲ್ಲಿ ಜುಲೈ 10, 2024ರಂದು ಯಕ್ಷಶಿಕ್ಷಣ ತರಗತಿಯನ್ನು ನಿಟ್ಟೂರು ಎಜುಕೇಷನಲ್ ಸೊಸೈಟಿಯ ಕಾರ್ಯದರ್ಶಿ ಮತ್ತು ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿಯೂ ಆದ ಮುರಲಿ ಕಡೆಕಾರ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಹಳೆ ವಿದ್ಯಾರ್ಥಿಯಾದ,ಯಕ್ಷಗುರು ನಿಶ್ವಲ್ ಕುಮಾರ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಅನಸೂಯ ಸ್ವಾಗತಿಸಿದರು. ವಿದ್ಯಾರ್ಥಿನಿ ಯಶಶ್ವಿನಿ ಕಾರ್ಯಕ್ರಮ ನಿರೂಪಿಸಿದ ಸಭೆಯ ಕೊನೆಯಲ್ಲಿ ಸಂಗೀತಾ ಧನ್ಯವಾದಗೈದರು.ಯಕ್ಷಗಾನ ಉಸ್ತುವಾರಿ ಶಿಕ್ಷಕ ದೇವದಾಸ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದರು.