ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ ಇವರ ವತಿಯಿಂದ ಯಕ್ಚಗಾನ ಕಲಾರಂಗ- ಉಡುಪಿ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಯಕ್ಷಗಾನ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ- ಜಾನುವಾರುಕಟ್ಟೆ ಬಿಲ್ಲಾಡಿ( ಬ್ರಹ್ಮಾವರ ವಲಯ) ದಲ್ಲಿ ಇಂದು ಉದ್ಘಾಟಿಸಲಾಯಿತು.
ನಿವೃತ್ತ BIERT ಹಾಗೂSDMC ಸದಸ್ಯರಾದ ಶ್ರೀ ಚಂದ್ರಶೇಖರ ಶೆಟ್ಟಿಯವರು ಈ ಯಕ್ಷಶಿಕ್ಷಣವನ್ನು ದೀಪ ಬೆಳಗಿ ಉದ್ಘಾಟಿಸಿದರು.
ಉಡುಪಿ ಯಕ್ಷಶಿಕ್ಷಣ ಟ್ರಸ್ಟ್ ಹಾಗೂ ಯಕ್ಷಗಾನ ಕಲಾರಂಗದ ಈ ಮಹೋನ್ನತ ಯಕ್ಷಗಾನ ಅಭಿಯಾನದಿಂದ ನಮ್ಮ ನಾಡಿನ ಆರಾಧನಾ ಕಲೆ ಪೀಳಿಗೆಯಿಂದ ಪೀಳಿಗೆಗೆ ದಾಟಿಸುವುದಕ್ಕೆ ಸಾಧ್ಯವಾಗುತ್ತಿದೆ.ಇದು ಸರಕಾರಿ ಪ್ರೌಢಶಾಲೆಯ ಮಕ್ಕಳ ಹಾಗೂ ಪೋಷಕರ ಸೌಭಾಗ್ಯವೇ ಸರಿ. ಶಾಲೆಯೊಂದು ಸಾಂಸ್ಕ್ಕತಿಕವಾಗಿ ಗುರುತಿಸಿಕೊಳ್ಳಲು ಇದರಿಂದ ಸುಲಭ ಸಾಧ್ಯ ಎಂದು ಉದ್ಘಾಟಕರು ನುಡಿದರು.
ಸಭಾವೇದಿಕೆಯಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಉಡುಪಿಯ ಗುರುಗಳಾದ ಪ್ರಸಾದ್ ಕುಮಾರ್ ಮೊಗೆಬೆಟ್ಟು ಹಾಗೂ ಶಾಲಾ ಮುಖ್ಯೋಪಾಧ್ಯಾಯರು,ಅಧ್ಯಾಪಕರು ಉಪಸ್ಥಿತರಿದ್ದರು.ವಾರದಲ್ಲಿ ಎರಡು ದಿನ ಶಾಲೆಯಲ್ಲಿ ಯಕ್ಷಗಾನ ತರಬೇತಿ ನಡೆಸಲಾಗುತ್ತಿದ್ದು ಈ ಪ್ರೌಢಶಾಲೆಯಲ್ಲಿ ಇದೇ ಮೊದಲ ಬಾರಿಗದ ಯಕ್ಷಶಿಕ್ಷಣ ನೀಡಲಾಗುತ್ತಿದೆ.