ಉಡುಪಿಯ ಸರಕಾರಿ ಸಂಯುಕ್ತ ಪ್ರೌಢಶಾಲೆ,ಒಳಕಾಡು ಇಲ್ಲಿ ಜುಲೈ 8 ರಂದು 2024 ಸಾಲಿನ ಯಕ್ಷಶಿಕ್ಷಣ ತರಗತಿಯ ಉದ್ಘಾಟನೆಯನ್ನು ಟ್ರಸ್ಟಿನ ಕಾರ್ಯದರ್ಶಿ ಮುರಲಿ ಕಡೆಕಾರ್ ಜ್ಯೋತಿ ಬೆಳಗಿಸಿ ನೆರವೇರಿಸಿದರು. ಅಭ್ಯಾಗತರಾಗಿ ಸರಕಾರಿ ಪದವಿ ಪೂರ್ವ ಕಾಲೇಜು,ತೆಂಕನಿಡಿಯೂರು ಇದರ ಪ್ರಾಂಶುಪಾಲರಾದ ವಿಶ್ವನಾಥ ಕರಬ ಭಾಗವಹಿಸಿದರು.ಇದೇ ಸಂದರ್ಭದಲ್ಲಿ ಶಾಲೆಯ ವಿವಿಧ ಸಂಘಗಳ ಉದ್ಘಾಟನೆ ನೆರವೇರಿತು.ಈ ಸಂದರ್ಭದಲ್ಲಿ ಯಕ್ಷ ಗುರುಗಳಾದ ರತ್ನಾಕರ ಶೆಣೈ,ನಿವೃತ್ತ ಪ್ರಾಂಶುಪಾಲೆ ತಾರಾ ಮೇಡಮ್,ರವಿರಾಜ ನಾಯಕ್ ಸಂಸ್ಕೃತ ಅಧ್ಯಾಪಕರಾದ ವೆಂಕಟರಮಣ ಉಪಾಧ್ಯ,ಎಸ್.ಡಿ.ಎಂ. ಸಿ.ಯ ಸದಸ್ಯರಾದ ಪ್ರವೀಣ ಪೂಜಾರಿ ಮತ್ತು ವಸಂತಿ ಉಪಸ್ಥಿತರಿದ್ದರು.ಶಾಲಾ ಮುಖ್ಯಶಿಕ್ಷಕಿ ಪೂರ್ಣಿಮಾರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಗಣಪತಿ ಭಟ್ ಸ್ವಾಗತಿಸಿದರು.ಶಿವರಾಮ ಶೆಟ್ಟಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರತಿಭಾ ನಾಯಕ್ ಧನ್ಯವಾದ ಸಮರ್ಪಿಸಿದ ಕಾರ್ಯಕ್ರಮದ ನಿರ್ವಹಣೆಯನ್ನು ವಿದ್ಯಾರ್ಥಿನಿ ಸನ್ನಿಧಿ ನಾಯಕ್ ನೆರವೇರಿಸಿದರು.