ದ್ವಿತೀಯ ಪಿಯುಸಿ ಮುಗಿಸಿದ ವಿದ್ಯಾ ಪೋಷಕ್ ನ 220 ವಿದ್ಯಾರ್ಥಿಗಳ ಒಂದು ದಿನದ ಶೈಕ್ಷಣಿಕ ಸಮಾವೇಶ ಇಂದು ಯಕ್ಷಗಾನ ಕಲಾರಂಗದ ನೂತನ ಕಟ್ಟಡ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್ಮೆಂಟ್ ಟ್ರೈನಿಂಗ್ ಅಂಡ್ ರಿಸರ್ಚ್ ಸೆಂಟರ್(ಐ.ವೈ.ಸಿ.)ನಲ್ಲಿ ಜರುಗಿತು. ಹುಬ್ಬಳ್ಳಿಯ ಮೈಲೈಫ್ ಸಂಸ್ಥಾಪಕ ಪ್ರವೀಣ್ ವಿ. ಗುಡಿ ಅವರು ಪ್ರೇರಕರಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸಿ. ಇ. ಟಿ ಬರೆದ ಇಂಜಿನಿಯರಿಂಗ್ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಡಾ.ಶ್ರುತಕೀರ್ತಿರಾಜ್ ವಿಸ್ತೃತವಾದ ಮಾಹಿತಿ ನೀಡಿದರು. ಲೆಕ್ಕಪರಿಶೋಧಕ ವಿಭಾಗದಲ್ಲಿ ಅಧ್ಯಯನ ಮಾಡಲಿರುವ ವಾಣಿಜ್ಯದ ವಿದ್ಯಾರ್ಥಿಗಳಿಗೆ ತ್ರಿಷಾ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ವಿಘ್ನೇಶ್ ಶೆಣೈ ಮಾರ್ಗದರ್ಶನ ನೀಡಿದರು. ಬ್ಯಾಂಕುಗಳಲ್ಲಿ ಶೈಕ್ಷಣಿಕ ಸಾಲ ತೆಗೆಯುವಾಗ ಅನುಸರಿಸಬೇಕಾದ ವಿಚಾರಗಳ ಬಗ್ಗೆ ಕೆನರಾ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ವಿನಯ್ ಕುಮಾರ್ ಮಾಹಿತಿ ನೀಡಿದರು. ಕಾರ್ಯದರ್ಶಿ ಮುರಲಿ ಕಡೆಕಾರ್,ಜೊತೆ ಕಾರ್ಯದರ್ಶಿಗಳಾದ ನಾರಾಯಣ ಎಂ.ಹೆಗಡೆ ಹಾಗೂ ಹೆಚ್.ಎನ್.ಶೃಂಗೇಶ್ವರ ಹಾಗೂ ವಿದ್ಯಾ ಪ್ರಸಾದ್ ಸಮಾವೇಶವನ್ನು ಸಂಯೋಜಿಸಿದರು. ವಿದ್ಯಾಪ್ರಸಾದ್ ಮತ್ತು ವಿಜಯ ಕುಮಾರ್ ಮುದ್ರಾಡಿ ಉಪಸ್ಥಿತರಿದ್ದರು.