Yakshagana Kalaranga

ವಿದ್ಯಾಪೋಷಕ್ ಸನಿವಾಸ ಶಿಬಿರ ಉದ್ಘಾಟನೆ.

ಯಕ್ಷಗಾನ ಕಲಾರಂಗದ ಪ್ರಥಮ ಪಿ.ಯು.ಸಿ ಮುಗಿಸಿದ ವಿದ್ಯಾಪೋಷಕ್ ವಿದ್ಯಾರ್ಥಿಗಳ ಐದು ದಿನಗಳ ಸನಿವಾಸ ಶಿಬಿರ ಮೇ 8, 2024ರಂದು ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‍ಮೆಂಟ್, ಟ್ರೈನಿಂಗ್ & ರಿಸರ್ಚ್ ಸೆಂಟರ್‍ನಲ್ಲಿ ಆರಂಭಗೊಂಡಿತು. ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳರು ಜ್ಯೋತಿ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ, ಕಳೆದ 12 ವರ್ಷಗಳಿಂದ ಅಂಬಲಪಾಡಿ ದೇವಳದಲ್ಲಿ ನಡೆಸುತ್ತಾ ಬಂದ ಅತ್ಯಂತ ಉಪಯುಕ್ತವಾದ ಶೈಕ್ಷಣಿಕ ಶಿಬಿರವು ಈ ಬಾರಿ ಸಂಸ್ಥೆಯ ಸ್ವಂತ ಕಟ್ಟಡದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಸಾರ್ವಜನಿಕರ ವಿಶ್ವಾಸಗಳಿಸಿದ ಈ ಸಂಸ್ಥೆ ಸಾರ್ಥಕ 50 ವರ್ಷಗಳನ್ನು ಪೂರೈಸುತ್ತಿರುವುದು ನಮಗೆಲ್ಲಾ ಅಭಿಮಾನದ ಸಂಗತಿ ಎಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹ ಉಪಕುಲಪತಿ ಡಾ. ನಾರಾಯಣ ಸಭಾಹಿತ ಅವರು ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮಾಹೆಯು ಸಂಪೂರ್ಣ ಉಚಿತವಾಗಿ ಅವಕಾಶ ಕಲ್ಪಿಸುತ್ತದೆ, ಕಲಾರಂಗದ ಕಾರ್ಯ ಚಟುವಟಿಕೆಗಳಿಗೆ ಮಾಹೆ ಸದಾ ಬೆಂಬಲವನ್ನು ನೀಡುತ್ತದೆ ಎಂದು ನುಡಿದರು. ಅಭ್ಯಾಗತರಾಗಿ ಪ್ರೊ. ಉಪೇಂದ್ರ ಸೋಮಯಾಜಿ, ಎಚ್. ನರಸಿಂಹ ಮೂರ್ತಿ, ಯು. ವಿಶ್ವನಾಥ ಶೆಣೈ, ಮರ್ಣೆ ಉಮೇಶ್ ಭಟ್, ಯು. ಎಸ್. ರಾಜಗೋಪಾಲ ಆಚಾರ್ಯ ಭಾಗವಹಿಸಿದ್ದರು. ಮೈಲೈಫ್ ಹುಬ್ಬಳ್ಳಿ ಇದರ ಸ್ಥಾಪಕ, ಶಿಬಿರದ ನಿರ್ದೇಶಕರೂ ಆದ ಪ್ರವೀಣ್ ಗುಡಿ ಹಾಗೂ ಸಂಸ್ಥೆಯ ಉಪಾಧ್ಯಾಕ್ಷರುಗಳಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಪ್ರೊ. ಸದಾಶಿವ ರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಅಧ್ಯಕ್ಷರಾದ ಎಮ್. ಗಂಗಾಧರ ರಾವ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಅಶೋಕ್ ಎಮ್. ವಂದನಾರ್ಪಣೆ ಸಲ್ಲಿಸಿದರು. ಮೇ 12ರ ತನಕ ನಡೆಯುವ ಈ ಐದು ದಿನದ ಶಿಬಿರದಲ್ಲಿ 220 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.

Leave a Comment

Your email address will not be published. Required fields are marked *

We're currently hard at work gathering information and crafting content to bring you the best experience. Stay tuned for exciting updates!