03.01.2024 ರಂದು ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜು ವಠಾರದಲ್ಲಿ ಮೂರು ದಿನ ಜರುಗಲಿರುವ ಕಿಶೋರ ಯಕ್ಷಗಾನ ಸಂಭ್ರಮವನ್ನು ಕುಂದಾಪುರ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಭ್ಯಾಗತರಾಗಿ ಕುಂದಾಪುರ ತಹಶೀಲ್ದಾರರಾದ ಶ್ರೀಮತಿ ಶೋಭಾಲಕ್ಷ್ಮಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೋಭಾ ಶೆಟ್ಟಿ, ಎಂ. ಗಂಗಾಧರ ರಾವ್, ರಾಮಕೃಷ್ಣ ಬಿ. ಜಿ., ಗೌತಮ್ ಶೆಟ್ಟಿ, ಸೂರ್ಯಕಾಂತ್ ದಫೇದಾರ್ ಭಾಗವಹಿಸಿದ್ದರು. ಎಸ್. ವಿ. ಭಟ್ ವೇದಿಕೆಯಲ್ಲಿದ್ದರು, ಯಕ್ಷ ಶಿಕ್ಷಣ ಟ್ರಸ್ಟ್ ನ ಎಚ್. ಎನ್. ಶೃಂಗೇಶ್ವರ, ನಾಗರಾಜ ಹೆಗಡೆ, ಗಣೇಶ್ ಬ್ರಹ್ಮಾವರ ಸಹಕರಿಸಿದರು. ಪ್ರದರ್ಶನಾ ಸಂಘಟನೆಯ ಕಾರ್ಯದರ್ಶಿ ಶಂಕರ್ ಅಂಕದಕಟ್ಟೆ ಸ್ವಾಗತಿಸಿದರು, ನಾರಾಯಣ ಎಂ. ಹೆಗಡೆ ವಂದನಾರ್ಪಣೆಗೈದರು, ಕಾರ್ಯದರ್ಶಿ ಮುರಲಿ ಕರೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಸಭೆಯ ಪೂರ್ವದಲ್ಲಿ ಸರಕಾರಿ ಪ್ರೌಢಶಾಲೆ, ಬಸ್ರೂರು ಇಲ್ಲಿಯ ವಿದ್ಯಾರ್ಥಿಗಳಿಂದ, ಬೇಳೂರು ವಿಷ್ಣುಮೂರ್ತಿ ನಾಯಕ್ ಇವರ ನಿರ್ದೇಶನದಲ್ಲಿ ಕನಕಾಂಗಿ ಕಲ್ಯಾಣ, ಸಭೆಯ ಬಳಿಕ ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ರಾಮಾಶ್ವಮೇಧ ಯಕ್ಷಗಾನಗಳು ಪ್ರದರ್ಶನಗೊಂಡವು.