30-12-2023 ರಂದು ಮಣೂರಿನಲ್ಲಿ ಮೂರು ದಿನ ಜರುಗಲಿರುವ ಕಿಶೋರ ಯಕ್ಷಗಾನ ಸಂಭ್ರಮವನ್ನು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷರಾದ ಡಾ.ಜಿ.ಶಂಕರ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಭ್ಯಾಗತರಾಗಿ ಡಾ. ಪ್ರಭಾಕರ ತೋಳಾರ್, ಶ್ರೀ ಡೆನ್ನಿಸ್ ಬಾಂಜಿ, ನಿರಂಜನ್ ನಾಯ್ಕ್, ಯಕ್ಷ ಶಿಕ್ಷಣ ಟ್ರಸ್ಟ್ ನ ವಿ.ಜಿ.ಶೆಟ್ಟಿ, ಎಚ್.ಎನ್.ಶೃಂಗೇಶ್ವರ, ನಾಗರಾಜ ಹೆಗಡೆ ಪಾಲುಗೊಂಡರು. ಕಾರ್ಯದರ್ಶಿ ಮುರಲಿ ಕರೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ ಬ್ರಹ್ಮಾವರ ಧನ್ಯವಾದ ಸಲ್ಲಿಸಿದರು. ಆರಂಭದಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಶ್ರೀ ಸುಧಾಕರ್ ಶೆಟ್ಟಿ ಎಲ್ಲರನ್ನು ಸ್ವಾಗತಿಸಿದರು. ಸಭೆಯ ಪೂರ್ವದಲ್ಲಿ ಸೋಮ ಬಂಗೇರ ಸರಕಾರಿ ಪ್ರೌಢಶಾಲೆ, ಕೋಡಿ ಕನ್ಯಾನ, ಇಲ್ಲಿನ ವಿದ್ಯಾರ್ಥಿಗಳಿಂದ, ನವೀನ್ ಕೋಟ ಇವರ ನಿರ್ದೇಶನದಲ್ಲಿ ಗುರುದಕ್ಷಿಣೆ, ಸಭೆಯ ಬಳಿಕ ತೆಕ್ಕಟ್ಟೆ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳಿಂದ, ಸ್ಕಂದ ಇವರ ನಿರ್ದೇಶನದಲ್ಲಿ ಜಾಂಬವತಿ ಕಲ್ಯಾಣ ಯಕ್ಷಗಾನಗಳು ಪ್ರದರ್ಶನಗೊಂಡವು. ಕುಂದಾಪುರದ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ ಅವರ ಆಶಯದಂತೆ ವಿಧಾನಸಭಾ ಕ್ಷೇತ್ರದ 11 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣ ನೀಡಲಾಗುತ್ತಿದ್ದು, ಮಣೂರಿನಲ್ಲಿ ಜರುಗುವ ಆರು ಪ್ರದರ್ಶನದ ಜವಾಬ್ದಾರಿಯನ್ನು ಗೀತಾನಂದ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಆನಂದ ಸಿ.ಕುಂದರ್ ವಹಿಸಿಕೊಂಡಿರುವುದನ್ನು ಈ ಸಂದರ್ಭದಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್ ಕೃತಜ್ಞತೆಯಿಂದ ಸ್ಮರಿಸಿಕೊಂಡರು.