ಎಸ್.ವಿ.ಎಚ್ ಕನ್ನಡ ಮಾಧ್ಯಮ ಪ್ರೌಢ ಶಾಲೆ ಇನ್ನಂಜೆಯಲ್ಲಿ ಕಾಪು ವಿಧಾನಸಭಾ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿಯವರ ಆಶಯದಂತೆ ಯಕ್ಷಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇವರ ವತಿಯಿಂದ ವಿದ್ಯಾರ್ಥಿಗಳಿಗೆ ನಡೆಸಲ್ಪಡುವ ಯಕ್ಷಗಾನ ತರಗತಿಯನ್ನು 22-08-2023 ರಂದು ಹಿರಿಯ ಯಕ್ಷಗಾನ ಕಲಾವಿದ ಡಾ. ಕೊಳ್ಯೂರು ರಾಮಚಂದ್ರ ರಾವ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಮತ್ತು ಸದಸ್ಯರಾದ ಸುಬ್ರಹ್ಮಣ್ಯ ಬೈಪಡಿತ್ತಾಯ ಶುಭ ಹಾರೈಸಿದರು. ಶಾಲಾ ನಿವೃತ್ತ ಉಪನ್ಯಾಸಕ ನಂದನ್ ಕುಮಾರ್, ಪ್ರಾಚಾರ್ಯರಾದ ಪುಂಡರೀಕಾಕ್ಷ ಕೊಡಂಚ, ಆಡಳಿತಾಧಿಕಾರಿ ಮಂಜುಳ ಎಸ್. ನಾಯಕ್ ಹಾಗೂ ಯಕ್ಷಗುರು ಶಾಂತಾರಾಮ ಆಚಾರ್ಯ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ನಟರಾಜ ಉಪಾಧ್ಯ sಸ್ವಾಗತಿಸಿದರು. ಪ್ರಭಾಕರ ಭಟ್ ವಂದಿಸಿದರು. ಅನಿತಾ ವೀರ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು.