Yakshagana Kalaranga

ಮನೋಹರ್ ಕೆ. ಶ್ರದ್ಧಾಂಜಲಿ ಸಭೆ

ಎಂಟು ವರ್ಷಗಳ ಕಾಲ ಕೋಶಾಧಿಕಾರಿಯಾಗಿ ತನ್ನ ಬದುಕಿನ ಅಮೂಲ್ಯ ಸಮಯ ಮತ್ತು ಅನುಭವವನ್ನು ನೀಡಿ ಸಂಸ್ಥೆಯ ಕಾರ್ಯನಿರ್ವಹಣೆ ಸುಗಮವಾಗಿ ಸಾಗಲು ಕಾರಣೀಕರ್ತರಾಗಿದ್ದ ಮನೋಹರ ಕೆ. ಜೂನ್ 18ರಂದು ನಮ್ಮನ್ನಗಲಿದ್ದು, ಇವರ ಬಗ್ಗೆ ನುಡಿನಮನ ಕಾರ್ಯಕ್ರಮ ಜೂನ್ 20, 2023 ಮಂಗಳವಾರ ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ಜರಗಿತು. ಮನೋಹರ್ ಅವರ ಒಡನಾಡಿಗಳಾಗಿದ್ದ ಶೇಖರ್ ಅಂಚನ್, ಅನಂತರಾಜ ಉಪಾಧ್ಯ, ಕೆ. ಸದಾಶಿವ ರಾವ್, ಸೂರ್ಯಪ್ರಕಾಶ್, ಗಣೇಶ್ ಬ್ರಹ್ಮಾವರ, ವಿ.ಜಿ. ಶೆಟ್ಟಿ ಭಾವಪೂರ್ಣ ನುಡಿನಮನ ಸಲ್ಲಿಸಿದರು. ನುಡಿನಮನದಲ್ಲಿ ಅವರ ಸ್ನೇಹ, ಕರ್ತವ್ಯನಿಷ್ಠೆ, ಸಮರ್ಪಣಾ ಮನೋಭಾವ, ಕಾರ್ಯದಕ್ಷತೆ, ನಿರಂತರ ಕಲಿಕಾ ಮನೋಭಾವ, ಅನ್ಯಾನ್ಯ ಸಂಘಟನೆಗಳಲ್ಲಿ ಶ್ರದ್ಧೆಯ ನಿರ್ವಹಣೆ, ಎಲ್ಲರೊಂದಿಗೆ ಹೊಂದಿಕೊಂಡುಹೋಗುವ ಮನೋಭಾವ, ಕಿರಿಯರನ್ನು ಪ್ರೋತ್ಸಾಹಿಸುವ ಗುಣ, ಕಲಾಪ್ರೀತಿ ಮೊದಲಾದ ವಿಷಯಗಳು ಪ್ರಸ್ತಾಪಗೊಂಡವು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸಂಸ್ಥೆಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡರು. ಕಾರ್ಯದರ್ಶಿ ಮುರಲಿ ಕಡೆಕಾರ್ ಅವರ ವ್ಯಕ್ತಿತ್ವವನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ತಮ್ಮ ನುಡಿನಮನದೊಂದಿಗೆ ವಂದಿಸಿದರು. ಅವರ ಪುತ್ರ ಸುಕೇಶ್ ಕುಮಾರ್ ಕೆ. ಹಾಗೂ ಸೊಸೆ ಶ್ರೀಮತಿ ಪೂಜಾ ಎಸ್.ಎಂ ಉಪಸ್ಥಿತರಿದ್ದರು. ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

We're currently hard at work gathering information and crafting content to bring you the best experience. Stay tuned for exciting updates!