Yakshagana Kalaranga

ವಿದ್ಯಾಪೋಷಕ್‍ನ ಪದವಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶಿಬಿರ.

ಇಂದು (04.06.2023) ಅಂಬಲಪಾಡಿ ದೇವಳದ ಶ್ರೀ ಭವಾನಿ ಮಂಟಪದಲ್ಲಿ ವಿದ್ಯಾಪೋಷಕ್‍ನ ಪದವಿ ವಿದ್ಯಾರ್ಥಿಗಳಿಗೆ ಒಂದು ದಿನದ ಶೈಕ್ಷಣಿಕ ಸಮಾಲೋಚನಾ ಶಿಬಿರ ಜರಗಿತು. ದೇವಳದ ಧರ್ಮದರ್ಶಿಗಳಾದ ಡಾ. ನಿ. ಬೀ.ವಿಜಯ ಬಲ್ಲಾಳರು ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿ, ಪೂರ್ಣಪ್ರಜ್ಞಾ ಕಾಲೇಜಿನ ಉಪನ್ಯಾಸಕಿಯೂ ಆದ ಸುಪರ್ಣಾ ವಿದ್ಯಾಪೋಷಕ್ ಸಹಕಾರದಿಂದ ತಾನು ಮಾಡಿದ ಸಾಧನೆಯನ್ನು ಹಂಚಿಕೊಂಡಳು. ಸಿಎ ಮಾಡುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿನಿ ಕವನಾ ಸಿಎ ಕಲಿಕೆಯ ಕುರಿತು ತನ್ನ ಅನುಭವವನ್ನು ತಿಳಿಸಿದಳು. ಈ ಸಂದರ್ಭದಲ್ಲಿ ಉದ್ಯಮಿ ರವಿ ಭಟ್ ದಂಪತಿಯನ್ನು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಶಾಲು, ಸ್ಮರಣಿಕೆಯೊಂದಿಗೆ ಗೌರವಿಸಿದರು. ಹುಬ್ಬಳ್ಳಿಯ ಮೈಲೈಫ್‍ನ ಸ್ಥಾಪಕ ಪ್ರವೀಣ್ ಗುಡಿ, ಸಿಎ ಪ್ರದೀಪ್ ಜೋಗಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ದಾನಿಗಳಾದ ವಿಲಾಸಿನಿ ಬಿ. ಶೆಣೈ, ಪ್ರಮೀಳಾ ಐತಾಳ್, ತಾರಾದೇವಿ, ಉಪಾಧ್ಯಕ್ಷರಾದ ಎಸ್. ವಿ. ಭಟ್, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ, ಸದಸ್ಯರಾದ ಗಣೇಶ್ ರಾವ್ ಎಲ್ಲೂರು, ಅಶೋಕ್ ಎಮ್., ಸಂತೋಷ್ ಕುಮಾರ್ ಶೆಟ್ಟಿ,ರಾಜೀವಿ, ಸುದರ್ಶನ್ ಬಾಯಿರಿ, ಮಂಜುನಾಥ ಉಪಸ್ಥಿತರಿದ್ದರು. 230 ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

We're currently hard at work gathering information and crafting content to bring you the best experience. Stay tuned for exciting updates!