ತಾಳಮದ್ದಲೆ ಸಪ್ತಾಹದ ಅಂಗವಾಗಿ 2 ದಿನ ಮಲ್ಪೆಯ ಬಾಲಕರ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಲಿರುವ ತಾಳಮದ್ದಲೆಗಳನ್ನು ಉದ್ಯಮಿ ಸದಾನಂದ ಸಾಲಿಯಾನ್ ಅವರು 25-05-2023ರಂದು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಾಲಕರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಲಕ್ಷ್ಮಣ ವಿ. ಕರ್ಕೇರಾ ಇವರಿಗೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ಮರಣಿಕೆ ನೀಡಿ ಗೌರವಿಸಿದರು. ಶ್ರೀರಾಮ ಭಜನಾ ಮಂದಿರದ ನಿಕಟಪೂರ್ವ ಅಧ್ಯಕ್ಷ ಕರುಣಾಕರ ಮಲ್ಪೆ ಹಾಗೂ ಕಲಾರಂಗದ ಉಪಾಧ್ಯಕ್ಷರಾದ ಎಸ್. ವಿ. ಭಟ್, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ, ಸದಸ್ಯರುಗಳಾದ ಪ್ರೊ. ಎಂ. ಎಲ್. ಸಾಮಗ, ವಿಜಯ ಕುಮಾರ್ ಮುದ್ರಾಡಿ, ಕೆ. ಅಜಿತ್ ಕುಮಾರ್, ನಾಗರಾಜ್ ಹೆಗಡೆ ಹಾಗೂ ಮಂಜುನಾಥ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ತಾಳಮದ್ದಲೆ ಕರ್ಣಾರ್ಜುನ ಪ್ರಸ್ತುತಗೊಂಡಿತು.