![](https://yakshaganakalaranga.com/wp-content/uploads/2023/05/WhatsApp-Image-2023-05-20-at-6.17.03-PM.jpeg)
![](https://yakshaganakalaranga.com/wp-content/uploads/2023/05/WhatsApp-Image-2023-05-20-at-6.17.07-PM.jpeg)
ಯಕ್ಷಗಾನ ಕಲಾರಂಗ ಪ್ರತಿ ವರ್ಷ ತಾಳಮದ್ದಲೆ ಸಪ್ತಾಹ ಆಚರಿಸುತ್ತಾ ಬಂದಿದ್ದು, ಈ ಬಾರಿಯ ಸಪ್ತಾಹವು ಮೇ 21ರಿಂದ 27ರ ವರೆಗೆ ವಿವಿಧ ಸ್ಥಳಗಳಲ್ಲಿ ನಡೆಯಲಿದೆ. 21-05-2023 ಭಾನುವಾರ ಸಂಜೆ 5.00 ಗಂಟೆಗೆ ಪರ್ಕಳದ ವಿಘ್ನೇಶ್ವರ ಸಭಾಭವನದಲ್ಲಿ ಡಾ. ಕಬ್ಯಾಡಿ ಹರಿರಾಮ ಆಚಾರ್ಯರು ಸಪ್ತಾಹವನ್ನು ಉದ್ಘಾಟಿಸಲಿರುವರು. ಉಡುಪಿಯ ಮಾನ್ಯ ಶಾಸಕರಾದ ಯಶ್ಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ಜರಗಲಿರುವ ಸಮಾರಂಭದಲ್ಲಿ ಬಿ. ರಾಜ ಗೋಪಾಲ್ ಆಚಾರ್ಯ, ದಿಲೀಪ್ರಾಜ್ ಹೆಗ್ಡೆ ಹಾಗೂ ಗಣೇಶ ಪಾಟೀಲ್ ಪಾಲ್ಗೊಳ್ಳುವರು. ಸಮಾರಂಭದ ಬಳಿಕ ಸಂಜೆ 5.30ರಿಂದ 8.30ರ ತನಕ ‘ಭೀಷ್ಮಾರ್ಜುನ’ ತಾಳಮದ್ದಲೆ ಪ್ರಸ್ತುತಗೊಳ್ಳಲಿದೆ ಎಂಬುದಾಗಿ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿರುತ್ತಾರೆ.