ಇತ್ತೀಚೆಗೆ ನಿವೃತ್ತರಾದ ಕರ್ನಾಟಕ ಬ್ಯಾಂಕ್‍ನ ಆಡಳಿತ ನಿರ್ದೇಶಕರಾದ ಎಂ. ಎಸ್. ಮಹಾಬಲೇಶ್ವರ ಇವರಿಗೆ ಯಕ್ಷಗಾನ ಕಲಾರಂಗದ ವತಿಯಿಂದ ಇಂದು (25-04-2023) ಸಂಜೆ 6.00 ಗಂಟೆಗೆ ಪೇಜಾವರ ಮಠದ ಶ್ರೀ ರಾಮವಿಠಲ ಸಭಾಭವನದಲ್ಲಿ ಅಭಿನಂದನಾ ಸಮಾರಂಭ ಜರಗಲಿದೆ. ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಶೀರ್ವದಿಸಲಿದ್ದಾರೆ. ಡಾ. ಎಚ್. ಎಸ್ ಬಲ್ಲಾಳರ ಅಧ್ಯಕ್ಷತೆಯಲ್ಲಿ ಡಾ. ಜಿ. ಶಂಕರ್ ಶುಭಾಶಂಸನೆಗೈಯಲಿದ್ದಾರೆ. ಅಭ್ಯಾಗತರಾಗಿ ಹರಿಯಪ್ಪ ಕೋಟ್ಯಾನ್, ಬಿ. ರಾಜಗೋಪಾಲ್ ಹಾಗೂ ಅನ್ನಪೂರ್ಣಾ ಮಹಾಬಲೇಶ್ವರ ಎಂ. ಎಸ್. ಉಪಸ್ಥಿತರಿರುವರೆಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.