ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಪೀಠಾರೋಹಣದ “ವಿಶ್ವ ಸುವರ್ಣೋತ್ಸವ”ವನ್ನು ರಾಯಚೂರಿನ ಭಕ್ತರು ಒಂದು ವಾರ ಪರ್ಯಂತ ಸಾವಿರಾರು ಮಂದಿಯ ಸಮಕ್ಷ ಶ್ರದ್ಧಾ ಭಕ್ತಿಯಿಂದ ಏರ್ಪಡಿಸಿದರು. 19-4-2023ರಂದು ನಡೆದ ಮಂಗಲ ಮಹೋತ್ಸವ ಸಮಾರಂಭದಲ್ಲಿ ಯಕ್ಷಗಾನ ಕಲಾರಂಗದ ಪ್ರತಿನಿಧಿಗಳಾಗಿ ಮುರಲಿ ಕಡೆಕಾರ್, ನಾರಾಯಣ ಎಂ.ಹೆಗಡೆ, ಎಚ್.ಎನ್.ಶ್ರಂಗೇಶ್ವರ ಭಾಗವಹಿಸಿ ಶ್ರೀಗಳಿಗೆ ಭಕ್ತಿಪೂರ್ವಕ ಫಲ ಪುಷ್ಪ ಕಾಣಿಕೆ ಸಮರ್ಪಿಸಿ ಅನುಗ್ರಹ ಪಡೆದರು. ವಿಶ್ವಪ್ರಿಯತೀರ್ಥ ಶ್ರೀಪಾದರು ಸಂಸ್ಥೆಯನ್ನು ವಿಶೇಷವಾಗಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಅವರ ಎರಡನೇ ಪರ್ಯಾಯದಲ್ಲಿ ಅವರೇ ಉದ್ಘಾಟಿಸಿದ ವಿದ್ಯಾಪೋಷಕನ್ನು ಪ್ರತೀವರ್ಷ ದೊಡ್ಡ ಮೊತ್ತ ನೀಡಿ ಅನುಗ್ರಹಿಸುತ್ತಿದ್ದಾರೆ. ಸ್ವಾಮೀಜಿಯವರು ಅನುಗ್ರಹ ಮಂತ್ರಾಕ್ಷತೆ ನೀಡಿ ಸಂಸ್ಥೆ ಇತ್ಯೋಪತಿಶಯವಾಗಿ ವರ್ಧಿಸಲಿ ಎಂದು ಆಶೀರ್ವದಿಸಿದರು.