Yakshagana Kalaranga

ಅಂಬಲಪಾಡಿ ಶೈಕ್ಷಣಿಕ ಶಿಬಿರ ಸಮಾರೋಪ.

ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಅಂಬಲಪಾಡಿ ಶೈಕ್ಷಣಿಕ ಸನಿವಾಸ ಶಿಬಿರವು 23-03-2023ರಂದು ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ದೇವಳದ ಧರ್ಮದರ್ಶಿ ಡಾ. ನಿ. ಬೀ. ವಿಜಯ ಬಲ್ಲಾಳರು ಕಳೆದ 11 ವರ್ಷಗಳಿಂದ ಯಕ್ಷಗಾನ ಕಲಾರಂಗ ಶ್ರದ್ಧಾಪೂರ್ವಕವಾಗಿ ಶಿಬಿರವನ್ನು ನಡೆಸುತ್ತಾ ಬಂದಿದ್ದು, ಇದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಮಹತ್ತರ ಬದಲಾವಣೆ ಸಾಧ್ಯವಾಗಿದೆ. ಇಂತಹ ಔಚಿತ್ಯಪೂರ್ಣ, ಅರ್ಥಪೂರ್ಣ ಕಾರ್ಯಕ್ರಮಗಳಿಗೆ ದೇವಳ ಸದಾ ಆಶ್ರಯ ನೀಡುತ್ತಾ ಬಂದಿದೆ ಎಂದು ಹರ್ಷವ್ಯಕ್ತಪಡಿಸಿದರು. ಹುಬ್ಬಳ್ಳಿಯ ಮೈಲೈಫ್ ಸಂಸ್ಥಾಪಕರೂ, ಶಿಬಿರದ ನಿರ್ದೇಶಕರೂ ಆದ ಶ್ರೀ ಪ್ರವೀಣ್ ವಿ. ಗುಡಿ ಹಾಗೂ ಬಳಗದವರನ್ನು ಈ ಸಂದರ್ಭದಲ್ಲಿ ಬಲ್ಲಾಳರು ಗೌರವಿಸಿದರು. ಸಮಾರಂಭದಲ್ಲಿ ಅಭ್ಯಾಗತರಾಗಿ ಡಾ. ಕೃಷ್ಣಪ್ರಸಾದ್, ಶ್ರೀಮತಿ ವಿಮಲಾ ಚಂದ್ರಶೇಖರ್, ಡಾ. ಪ್ರಸಾದ್ ರಾವ್, ಶ್ರೀ ಸುಬ್ರಮಣ್ಯ ಬೈಪಡಿತ್ತಾಯ ,ಶ್ರೀ ಎನ್. ರಾಮ ಭಟ್, ಶ್ರೀ ವಿಶುಕುಮಾರ್ ಶೆಟ್ಟಿ ಹಾಗೂ 99 ಗೇಮ್ಸ್ ನ ಶ್ರೀ ಶಣ್ಮುಖರಾಜ್ ಪಾಲ್ಗೊಂಡಿದ್ದರು. ಆರಂಭದಲ್ಲಿ ಶಿಬಿರಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಸೀನಿಯರ್ ಸಿವಿಲ್ ಜಡ್ಜ್ ಶ್ರೀಮತಿ ಶರ್ಮಿಳಾ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷರಾದ ಎಸ್. ವಿ. ಭಟ್ ಉಪಸ್ಥಿತರಿದ್ದ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ್ ರಾವ್ ವಹಿಸಿದ್ದರು. ನಿರ್ವಹಣೆಯನ್ನು ಕಾರ್ಯದರ್ಶಿ ಮುರಲಿ ಕಡೆಕಾರ್ ಮಾಡಿದರು. ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಧನ್ಯವಾದ ಸಮರ್ಪಿಸಿದರು.

We're currently hard at work gathering information and crafting content to bring you the best experience. Stay tuned for exciting updates!