Yakshagana Kalaranga

ಸಮಗ್ರ ಯಕ್ಷಗಾನ ಸಮ್ಮೇಳನ – 2023

ಕರ್ನಾಟಕ ಸರಕಾರವು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಮೂಲಕ ಪ್ರಥಮ ಯಕ್ಷಗಾನ ಸಮ್ಮೇಳನವನ್ನು ಆಯೋಜಿಸಿದ್ದು, ಫೆಬ್ರವರಿ 11 ಮತ್ತು 12, 2023 ರಂದು ಎಂ.ಜಿ.ಎಂ. ಕಾಲೇಜಿನ ಎ.ಎಲ್.ಎನ್.ರಾವ್ ಕ್ರೀಡಾಂಗದಲ್ಲಿ ಅತ್ಯಂತ ವಿಜೃಂಭಣೆಯಿಂದ ಯಶಸ್ವಿಯಾಗಿ ಜರಗಿತು. 3 ವೇದಿಕೆಗಳನ್ನು ಮಾಡಲಾಗಿತ್ತು. 3 ವೇದಿಕೆಗಳಿಗೆ ಹೆಸರಾಂತ ಕಲಾವಿದರಾದ ಮಲ್ಪೆ ಶಂಕರನಾರಾಯಣ ಸಾಮಗ, ಕೆರೆಮನೆ ಶಿವರಾಮ ಹೆಗಡೆ ಹಾಗೂ ಅಳಿಕೆ ರಾಮಯ್ಯ ರೈ ಎಂದು ಹೆಸರಿಡಲಾಗಿತ್ತು. 11, ಶನಿವಾರದಂದು ಪೂರ್ವಾಹ್ನ 9.00 ಗಂಟೆಗೆ ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಿಂದ ಗಣಪತಿಯನ್ನಿಟ್ಟ ಪಲ್ಲಕ್ಕಿಯೊಂದಿಗೆ ಭವ್ಯ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷರನ್ನು ಸಮ್ಮೇಳನಾಂಗಣಕ್ಕೆ ಬರಮಾಡಿಕೊಳ್ಳಲಾಯಿತು. ಪೂರ್ವಾಹ್ನ 10.30ಕ್ಕೆ ಸಮ್ಮೇಳನದ ಉದ್ಘಾಟನೆಯನ್ನು ಮಾಡಲಾಯಿತು. ಸಂಜೆ 6ರಿಂದ 7.30ರ ವರೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆದಿತ್ತು. ಮೂರೂ ವೇದಿಕೆಗಳಲ್ಲೂ ಎರಡು ದಿನಗಳ ಕಾಲ ಯಕ್ಷಗಾನಗಳು, ತಾಳಮದ್ದಲೆಗಳು, ಗೊಂಬೆಯಾಟಗಳು ಹಾಗೂ ಗೋಷ್ಠಿಗಳು ಜರಗಿದವು. 12ರಂದು ಮಲ್ಪೆ ಶಂಕರನಾರಾಯಣ ವೇದಿಕೆಯಲ್ಲಿ 75 ಹಿರಿಯ ಸಾಧಕ ಕಲಾವಿದರನ್ನು ಸಮ್ಮಾನಿಸಲಾಯಿತು. ಸಂಜೆ 5.00 ರಿಂದ 7ರ ವರೆಗೆ ಸಮಾರೋಪ ಸಮಾರಂಭ ಜರಗಿತು. ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ. ಎಂ. ಪ್ರಭಾಕರ ಜೋಶಿ, ಸುಚೇತಾ ದಂಪತಿಯನ್ನು ಬೆಳ್ಳಿಯ ಯಕ್ಷಕೇದಗೆ ಸಹಿತ ಶ್ರೀಕೃಷ್ಣನ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಕಲಾ ಕಾರ್ಯಕ್ರಮದೊಂದಿಗೆ ಯಕ್ಷಗಾನ ಸಮ್ಮೇಳನವು ಮುಕ್ತಾಯಗೊಂಡಿತು.

We're currently hard at work gathering information and crafting content to bring you the best experience. Stay tuned for exciting updates!