ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎ. ಅನಂತರಾಜ ಉಪಾಧ್ಯಾಯರು ತಮ್ಮ 70ರ ವರ್ಷಾಚರಣೆಯನ್ನು ಸರಳವಾಗಿ ಆಚರಿಸಿ ಯಕ್ಷಗಾನ ಕಲಾರಂಗಕ್ಕೆ ರೂಪಾಯಿ 70 ಸಾವಿರ ನಿಧಿ ಸಮರ್ಪಿಸುವುದರ ಮೂಲಕ ಜನ್ಮದಿನದ ಆಚರಣೆಯನ್ನು ಅರ್ಥಪೂರ್ಣವಾಗಿಸಿಕೊಂಡರು. ಕಳೆದ ಹತ್ತು ವರ್ಷಗಳಿಂದ ಪ್ರತಿನಿತ್ಯ ಸಂಸ್ಥೆಗೆ ಬಂದು ಕೋಶಾಧಿಕಾರಿ ಕೆ. ಮನೋಹರರಿಗೆ ಬ್ಯಾಂಕಿನ ವ್ಯವಹಾರ ಮತ್ತು ಲೆಕ್ಕಾಚಾರಕ್ಕೆ ಸಹಕರಿಸುತ್ತಿದ್ದಾರೆ. ಅವರ ನಿಸ್ಪ್ರಹ ಸೇವೆಯನ್ನು ಲಕ್ಷಿಸಿ ಎರಡು ವರ್ಷದ ಹಿಂದೆ ಅವರಿಗೆ ಸಂಸ್ಥೆ ಸೇವಾಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಸಂಬಂಧದಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರರ ಭಾವನಾಗಿರುವ ಉಪಾಧ್ಯಾಯರು ಸಂಸ್ಥೆಗೆ ನೀಡಿದ ಸೇವೆ ಮತ್ತು ಕೊಡುಗೆಗಾಗಿ ಅಧ್ಯಕ್ಷ ಎಂ. ಗಂಗಾಧರ ರಾವ್ ಕೃತಜ್ಞತೆ ವ್ಯಕ್ತಪಡಿಸಿ ಇಂತಹ ಹಿರಿಯರ ತ್ಯಾಗ, ಕೊಡುಗೆಯಿಂದ ಸಂಸ್ಥೆ ಈ ಎತ್ತರ ಸಾಧಿಸಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಡದಿ ಗೀತಾ ಉಪಾಧ್ಯ,ಪುತ್ರ ಅರುಣರಾಜ ಉಪಾಧ್ಯ, ಪುತ್ರಿ ಅರ್ಚನಾ, ಅಳಿಯ ಕೃಷ್ಣಪ್ರಸಾದ್ , ಮೊಮ್ಮಗಳಾದ ಪ್ರಣವಿ ಉಪಸ್ಥಿತರಿದ್ದರು.