ಯಕ್ಷಶಿಕ್ಷಣ ಟ್ರಸ್ಟ್ನ ಕಿಶೋರ ಯಕ್ಷಗಾನ ಸಂಭ್ರಮ – 2022ನ್ನು 13-12-2022ರಂದು ಸಂಜೆ 6.00 ಗಂಟೆಗೆ ಬ್ರಹ್ಮಾವರದ ಬಂಟರ ಭವನದ ಬಳಿ ಟ್ರಸ್ಟ್ ನ ಅಧ್ಯಕ್ಷರೂ, ಶಾಸಕರೂ ಆದ ಶ್ರೀ ಕೆ. ರಘುಪತಿ ಭಟ್ ಉಪಸ್ಥಿತಿಯಲ್ಲಿ ಉದ್ಘಾಟನೆಗೊಂಡಿತು. ಬ್ರಹ್ಮಾವರದಲ್ಲಿ ಮೊದಲ ದಿನದ ಪ್ರದರ್ಶನವಾಗಿ ಬ್ರಹ್ಮಾವರ ನಿರ್ಮಲಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಕಾಳಿಂದಿ ವಿವಾಹ (ನಿ: ಐರೋಡಿ ಮಂಜುನಾಥ ಕುಲಾಲ್) ಹಾಗೂ ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಶ್ರೀಕೃಷ್ಣ ಪಾರಿಜಾತ (ನಿ: ಕೇಶವ ಆಚಾರ್)
ಎರಡನೇ ದಿನದ ಪ್ರದರ್ಶನವಾಗಿ 14-12-2022 ರಂದು ನುಕ್ಕೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಜಾಂಬವತಿ ಕಲ್ಯಾಣ (ನಿ: ಮಹೇಶ್ ಮಂದಾರ್ತಿ) ಹಾಗೂ ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ತಾಮ್ರಧ್ವಜ ಕಾಳಗ (ನಿ: ನರಸಿಂಹ ತುಂಗ)
ಮೂರನೇ ದಿನದ ಪ್ರದರ್ಶನವಾಗಿ 15-12-2022 ರಂದು ಚೇರ್ಕಾಡಿ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಲವಕುಶ (ನಿ: ಮಂಜುನಾಥ್ ಪ್ರಭು) ಹಾಗೂ ಕುಂಜಾಲು ವಿ.ಕೆ.ಆರ್. ಆಚಾರ್ಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಗಜಾನನ ಗಣಪತಿ (ನಿ: ಕೇಶವ ಆಚಾರ್)
4ನೇ ದಿನದ ಪ್ರದರ್ಶನವಾಗಿ 16-12-2022 ರಂದು ಕಳತ್ತೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಯಕ್ಷೋತ್ತಮ ಕಾಳಗ (ನಿ: ಮಹೇಶ್ ಮಂದಾರ್ತಿ) ಹಾಗೂ ಬ್ರಹ್ಮಾವರ ಎಸ್.ಎಂ.ಎಸ್ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಂದ ಜಯಂತ ಬಂಧನ (ನಿ: ಐರೋಡಿ ಮಂಜುನಾಥ ಕುಲಾಲ್).
5ನೇ ದಿನದ ಪ್ರದರ್ಶನವಾಗಿ 17-12-2022 ರಂದು ಸರಕಾರಿ ಪ್ರೌಢಶಾಲೆ,ಕರ್ಜೆ,ಇಲ್ಲಿಯ ವಿದ್ಯಾರ್ಥಿಗಳಿಂದ ಶ್ವೇತಕುಮಾರ ಚರಿತ್ರೆ (ನಿ:ಕೇಶವ ಆಚಾರ್) ಹಾಗೂ ಬ್ರಹ್ಮಾವರ ಎಸ್.ಎಂ.ಎಸ್.ಆಂಗ್ಲ ಮಾಧ್ಯಮ(ಸಿ.ಬಿ.ಎಸ್.) ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ತರಣಿಸೇನ ಕಾಳಗ(ನಿ: ನರಸಿಂಹ ತುಂಗ)
6ನೇ ದಿನದ ಪ್ರದರ್ಶನವಾಗಿ 18-12-2022 ರಂದು ನಾಲ್ಕೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಪ್ರಮೀಳಾರ್ಜುನ-ಘೋರಭೀಷಣ ಕಾಳಗ (ನಿ: ಐರೋಡಿ ಮಂಜುನಾಥ ಕುಲಾಲ್) ಹಾಗೂ ಉಪ್ಪೂರು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಜಾಂಬವತಿ ಕಲ್ಯಾಣ (ನಿ: ಉದಯ ಕುಮಾರ್ ಮಧ್ಯಸ್ಥ)
7ನೇ ದಿನದ ಪ್ರದರ್ಶನವಾಗಿ 19-12-2022 ರಂದು ಕೊಕ್ಕರ್ಣೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಮೀನಾಕ್ಷಿ ಕಲ್ಯಾಣ(ನಿ:ಮಹೇಶ್ ಮಂದಾರ್ತಿ) ಹಾಗೂ ಆರೂರು ಮೊರಾರ್ಜಿ ದೇಸಾಯಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಮಾಯಾಪುರಿ ಮಹಾತ್ಮ್ಯೆ(ನಿ:ನರಸಿಂಹ ತುಂಗ) ಯಕ್ಷಗಾನ ಪ್ರದರ್ಶನಗೊಂಡಿತು.
ಕಳೆದ ಎಂಟು ದಿನಗಳಿಂದ ಪ್ರದರ್ಶನಗೊಳ್ಳುತಿದ್ದ ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ ಸಮಾರಂಭ 20-12-2022 ರಂದು ಜರಗಿತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್ ಮಾತನಾಡಿ ಯಕ್ಷಶಿಕ್ಷಣ ಟ್ರಸ್ಟ್ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಸಮಾರಂಭದ ಪೂರ್ವದಲ್ಲಿ ಆರೂರು ಮೊರಾರ್ಜಿ ದೇಸಾಯಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ದ್ರೌಪದಿ ಪ್ರತಾಪ (ನಿ: ನರಸಿಂಹ ತುಂಗ) ಯಕ್ಷಗಾನ ಪ್ರದರ್ಶನಗೊಂಡಿತು. ಯಕ್ಷಶಿಕ್ಷಣ ಟ್ರಸ್ಟ್‍ನ ಅಧ್ಯಕ್ಷರಾದ ಶಾಸಕ ಶ್ರೀ ಕೆ. ರಘುಪತಿ ಭಟ್ ಆಗಮಿಸಿ ಮಕ್ಕಳೊಂದಿಗೆ ಛಾಯಾಚಿತ್ರದಲ್ಲಿ ಪಾಲ್ಗೊಂಡರು. ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಸಹಕರಿಸಿದ ಬಿರ್ತಿ ರಾಜೇಶ್ ಶೆಟ್ಟಿಯವರ ನೇತೃತ್ವದ ಬ್ರಹ್ಮಾವರದ ಪ್ರದರ್ಶನ ಸಂಘಟನಾ ಸಮಿತಿಯನ್ನು ಶಾಸಕರು ವಿಶೇಷವಾಗಿ ಅಭಿನಂದಿಸಿದರು.