ಕಿಶೋರ ಯಕ್ಷಗಾನ ಸಂಭ್ರಮ-2022ರ 8ನೇ ದಿನದ ಪ್ರದರ್ಶನವಾಗಿ ನಿನ್ನೆ (04-12-2022) ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಮಾಯಾಪುರಿ ಮಹಾತ್ಮ್ಯೆ (ನಿ: ಕೇಶವ ಆಚಾರ್) ಹಾಗೂ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಶಶಿಪ್ರಭಾ ಪರಿಣಯ (ನಿ: ಕೃಷ್ಣಮೂರ್ತಿ ಭಟ್) ಯಕ್ಷಗಾನ ಪ್ರದರ್ಶನಗೊಂಡಿತು. ಇಂದ್ರಾಳಿ ಪ್ರೌಢಶಾಲೆಯ 10ನೇ ತರಗತಿಯ 21 ವಿದ್ಯಾರ್ಥಿಗಳು ಸೇರಿ ಅತೀ ಹೆಚ್ಚು 51 ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿರುತ್ತಾರೆ. ನಿನ್ನೆಯ ಎರಡನೇ ಪ್ರದರ್ಶನದ ಯಕ್ಷಗಾನದ ಸೊಬಗನ್ನು ಪ್ರವಾಸಕ್ಕೆಂದು ಬಂದ ಬೆಳಗಾಂವ್ ಮತ್ತು ಕೋಲಾರ ಜಿಲ್ಲೆಯ ತಲಾ 120 ವಿದ್ಯಾರ್ಥಿಗಳು ವೀಕ್ಷಿಸಿದರು.