ಪ್ರಥಮ ಬಿ. ಕಾಂ. ಓದುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿನಿ ಭವ್ಯಶ್ರೀಯ ನೂತನ ಮನೆಯ ‘ಗೃಹ ಪ್ರವೇಶ’ವು ದಿನಾಂಕ 17-11-2022 ರಂದು ಕುಂದಾಪುರದ ನೇರಳಕಟ್ಟೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ವಿದ್ಯಾಪೋಷಕ್ ವತಿಯಿಂದ ರೂಪಾಯಿ 50,000/-ದ ಉಡುಗೊರೆ ನೀಡಿ ಪ್ರೋತ್ಸಾಹಿಸಿದರು. ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿಗಳಾದ ಪ್ರೊ. ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ ಉಪಸ್ಥಿತರಿದ್ದರು. ಕಳೆದ ವರ್ಷ ವಿದ್ಯಾಪೋಷಕ್ ‘ವಿನಮ್ರ ಸಹಾಯ ವಿತರಣಾ’ ಸಮಾರಂಭಕ್ಕೆ ಮಗಳನ್ನು ತಂದೆ(ವೆಂಕಟರಮಣ ಆಚಾರ್ಯ) ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬರುವಾಗ ವಾಹನ ಅಪಘಾತದಿಂದ ತೀರಿಕೊಂಡದ್ದು ಮರೆಯಲಾಗದ ದುರ್ಘಟನೆಯಾಗಿದೆ. ವೆಂಕಟರಮಣ ಆಚಾರ್ಯರು ನಿಧನರಾದ ಸಂದರ್ಭದಲ್ಲಿ ಅರ್ಧದಲ್ಲಿದ್ದ ಮನೆಯನ್ನು ಬಂಧುಗಳು, ಆತ್ಮೀಯರು ಸೇರಿ ಪೂರ್ಣ ಮಾಡಿಕೊಟ್ಟಿದ್ದರು. ಈ ಹಿನ್ನಲೆಯಲ್ಲಿ ಸಂಸ್ಥೆಯ ವತಿಯಿಂದ ನಗದು ಉಡುಗೊರೆಯನ್ನು ನೀಡಲಾಯಿತು.