ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿನಿಯಾದ ಪಾದೂರಿನ ಮಲ್ಲಿಕಾ ಶೆಟ್ಟಿ (ದ್ವಿತೀಯ ಪಿ.ಯು.ಸಿ) ಹಾಗೂ ನರ್ಸಿಂಗ್ ವಿದ್ಯಾರ್ಥಿನಿ ರಕ್ಷಿತಾ ಶೆಟ್ಟಿ ಇವರಿಗೆ ಮಂಗಳೂರಿನ ಉದ್ಯಮಿ ಶ್ರೀ ಪಿ. ಗೋಕುಲನಾಥ ಪ್ರಭುರವರು ತಮ್ಮ ಮಾತೃಶ್ರೀ ಶ್ರೀಮತಿ ಪದ್ಮಾವತಿ ವೆಂಕಟ್ರಾಯ ಪ್ರಭು ಅವರ ಜನ್ಮಶತಾಬ್ದದ ಶುಭಾವಸರದಲ್ಲಿ ನಿರ್ಮಿಸಿಕೊಟ್ಟ ನೂತನ ಮನೆ ‘ಪದ್ಮಾವತಿ’ಯನ್ನು ಶ್ರೀಮತಿ ನಿವೇದಿತಾ ಜಿ. ಪ್ರಭು ಮತ್ತು ಶ್ರೀ ಪಿ. ಗೋಕುಲನಾಥ ಪ್ರಭು ಅವರು 16-06-2022 ರಂದು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಯಕ್ಷಗಾನ ಕಲಾರಂಗದಂತಹ ಸಂಸ್ಥೆಯೊಂದಿಗೆ ನಿಕಟ ಬಾಂಧವ್ಯ ನನಗೆ ತುಂಬಾ ಸಂತೋಷ ನೀಡಿದೆ. ಈ ಮನೆಯಲ್ಲಿ ಎಲ್ಲರೂ ಸುಖ ಸಂತೋಷದಿಂದ ಬಾಳುವಂತಾಗಲಿ ಎಂದು ಶುಭಕೋರಿದರು. ಅಭ್ಯಾಗತರದಾದ ಡಾ. ಜೆ.ಎನ್. ಭಟ್ ಮತ್ತು ಶ್ರೀಮತಿ ಶಾಂತಿ ಎನ್. ಭಟ್ ಶುಭಹರೈಸಿದರು. ಮನೆ ನಿರ್ಮಿಸಿದ ಇಂಜಿನಿಯರ್ ಕಾಪು ಲಕ್ಷ್ಮೀಶ ತಂತ್ರಿಯವರನ್ನು ಗೌರವಿಸಲಾಯಿತು. ಗೋಕುಲನಾಥ್ ಪ್ರಭು ಅವರ ಪುತ್ರ ಅವಿನಾಶ್ ಪ್ರಭು, ಯು. ವಿಶ್ವನಾಥ ಶೆಣೈ, ವಿನಾಯಕ್ ಬಾಳಿಗಾ, ಲೀಲಾಧರ ಶೆಟ್ಟಿ ಕಾಪು, ಅನಂತ ಮೂಡಿತ್ತಾಯ ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ಕೋಶಾಧಿಕಾರಿಗಳಾದ ಮನೋಹರ ಕೆ., ಪ್ರೊ. ಕೆ. ಸದಾಶಿವ ರಾವ್, ಎಚ್. ಎನ್. ಶೃಂಗೇಶ್ವರ, ಭುವನಪ್ರಸಾದ್ ಹೆಗ್ಡೆ, ಎ. ನಟರಾಜ ಉಪಾಧ್ಯ, ವಿಜಯ್ ಕುಮಾರ್ ಮುದ್ರಾಡಿ, ಕೆ. ಅಜಿತ್ ಕುಮಾರ್, ಗಣೇಶ್ ಬ್ರಹ್ಮಾವರ, ಅಶೋಕ್ ಎಂ., ಆನಂದ ಶೆಟ್ಟಿ, ಮಂಜುನಾಥ, ನಾಗರಾಜ ಹೆಗಡೆ ಹಾಗೂ ಇನ್ನಂಜೆ ಪ್ರೌಢಶಾಲೆಯ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಇದು ಸಂಸ್ಥೆಯು ದಾನಿಗಳ ನೆರವಿನಿಂದ ನಿರ್ಮಿಸಿಕೊಟ್ಟ 30ನೇ ಮನೆಯಾಗಿದ್ದು, ಈ ತಿಂಗಳಿನಲ್ಲಿ ಇನ್ನೂ 5 ಮನೆಗಳು ಉದ್ಘಾಟನೆಗೊಳ್ಳಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸುತ್ತಾ ನುಡಿದರು. ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದೊಗೆ ಕಾರ್ಯಕ್ರಮ ನಿರೂಪಿಸಿದರು.