22-05-2022 ರಂದು ಹಿರಿಯ ಯಕ್ಷಗಾನ ಕಲಾವಿದ, ಯಕ್ಷಗುರು, ಲೇಖಕ ತಾರಾನಾಥ ವೊರ್ಕಾಡಿಯವರಿಗೆ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಕೊಡಮಾಡುವ ‘ಯಕ್ಷಗಾನ ಸಾಧಕ’ ಪ್ರಶಸ್ತಿ ಪ್ರದಾನ ಸಮಾರಂಭ ಅರ್ಥಪೂರ್ಣವಾಗಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಂಡಿತು. ಉದ್ಘಾಟನೆ, ‘ಗೋವಿಂದ ನಂದ ಮುಕುಂದ ಪಾಹಿ ದೇವಾ’ ಪ್ರಾತ್ಯಕ್ಷಿಕೆ, ‘ಲೇಖಕ-ಕವಿ ತಾರಾನಾಥ’ ವಿಚಾರಗೋಷ್ಠಿ, ‘ಕಲಾವಿದ-ನೃತ್ಯಗುರು ತಾರಾನಾಥ’ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ಬಳಿಕ ಪ್ರಶಸ್ತಿ ಪ್ರದಾನ ಸರ್ವರಿಗೂ ನೆನಪಿನಲ್ಲಿಟ್ಟುಕೊಳ್ಳುವಂತೆ ಸೊಗಸಾಗಿ ಮೂಡಿಬಂತು.