Yakshagana Kalaranga

ಯಕ್ಷಗಾನ ಕಲಾರಂಗದ 47ನೇ ವಾರ್ಷಿಕ ಮಹಾಸಭೆ – 2022

ಉಡುಪಿಯ ಸಾಂಸ್ಕೃತಿಕ ಸಾಮಾಜಿಕ ಸಂಘಟನೆ ಯಕ್ಷಗಾನ ಕಲಾರಂಗದ 47ನೇ ವಾರ್ಷಿಕ ಮಹಾಸಭೆಯು ಪೇಜಾವರ ಮಠದ ಶ್ರೀರಾಮ ವಿಠಲ ಸಭಾಭವನದಲ್ಲಿ ಜುಲೈ 09, 2022 ರಂದು ಎಂ. ಗಂಗಾಧರ ರಾವ್‍ರ ಅಧ್ಯಕ್ಷತೆಯಲ್ಲಿ ಜರಗಿತು. ಮಹಾಸಭೆಯ ಕಲಾಪಗಳಾದ ಗತ ಮಹಾಸಭೆಯ ವರದಿ, ವಾರ್ಷಿಕ ವರದಿ, ಪರಿಶೋಧಿತ ಲೆಕ್ಕಪತ್ರ ಮಂಡನೆ, ಲೆಕ್ಕಪರಿಶೋಧಕರ ನೇಮಕದ ಅನಂತರ ಕಾರ್ಯಕಾರೀ ಸಮಿತಿ ಮತ್ತು ಸಲಹಾ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಆರಂಭದಲ್ಲಿ ವರದಿ ವರ್ಷದಲ್ಲಿ ಅಗಲಿದ ಸಂಸ್ಥೆಯ ಸದಸ್ಯರು ಹಾಗೂ ಕಲಾವಿದರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಉಪಾಧ್ಯಕ್ಷರಾದ ಎಸ್. ವಿ. ಭಟ್ ನುಡಿನಮನ ಸಲ್ಲಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಪಿ.ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ ಮತ್ತು ಕೋಶಾಧಿಕಾರಿಗಳಾದ ಕೆ. ಮನೋಹರ್, ಪ್ರೊ. ಕೆ. ಸದಾಶಿವ ರಾವ್, ಪ್ರೊ. ನಾರಾಯಣ ಎಂ. ಹೆಗಡೆ ಉಪಸ್ಥಿತರಿದ್ದರು.
ಹಿರಿಯ ಮೂಳೆ ತಜ್ಞ ಇತ್ತೀಚೆಗೆ ಇಂಗ್ಲೆಂಡ್‍ನ ಕರ ಶಸ್ತ್ರಚಿಕಿತ್ಸೆಯ ಸಂಘಟನೆಗಳ ಅಂತಾರಾಷ್ಟ್ರೀಯ ಒಕ್ಕೂಟದ ಪ್ರತಿಷ್ಟಿತ ‘ಪಯೊನೀರ್ ಇನ್ ಹ್ಯಾಂಡ್ ಸರ್ಜರಿ’ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಡಾ. ಭಾಸ್ಕರಾನಂದ ಕುಮಾರರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು. ಹಿರಿಯ ವೈದ್ಯ ಡಾ. ಪಿ.ಎಲ್.ಎನ್ ರಾವ್ ಅಭಿನಂದನಾ ಭಾಷಣ ಮಾಡಿದರು. ಇತ್ತೀಚೆಗೆ ಪಿ.ಎಚ್.ಡಿ ಪದವಿ ಪಡೆದ ಸಂಸ್ಥೆಯ ಸಕ್ರಿಯ ಸದಸ್ಯ ಹಾಗೂ ಮಣಿಪಾಲ ಕೆ.ಎಂ.ಸಿಯ ಫಿಜಿಯೋತೆರಫಿ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತುರುವ ಡಾ. ರಾಜೇಶ್ ನಾವುಡ ಇವರನ್ನು ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಯ ದಾನಿಗಳಾದ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್‍ನ ರಿಜಿಸ್ಟ್ರಾರ್ ವಿದ್ಯಾವಂತ ಆಚಾರ್ಯ ಹಾಗೂ ಸಂಸ್ಥೆಯ ಸದಸ್ಯ ನಂದಳಿಕೆಯ ಸುಬ್ರಹ್ಮಣ್ಯ ಬೈಪಡಿತ್ತಾಯರನ್ನು ಗೌರವಿಸಲಾಯಿತು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು. ಎಚ್.ಎನ್ ಶೃಂಗೇಶ್ವರ ಧನ್ಯವಾದ ಸಮರ್ಪಿಸಿದರು.

We're currently hard at work gathering information and crafting content to bring you the best experience. Stay tuned for exciting updates!