ಬೆಂಗಳೂರಿನಲ್ಲಿ ಸಿಂಜಿನ್ ಇಂಟರ್‌ನ್ಯಾಷನಲ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿ ದೀಪಕ್ ಕಾಮತ್,ಹಿರಿಯಡ್ಕ (course completed 2014) ಅಗಸ್ಟ್ 14ರಂದು ಕಚೇರಿಗೆ ಆಗಮಿಸಿ ರೂ 30000 ದೇಣಿಗೆಯನ್ನು ನೀಡಿದನು. ವಿದ್ಯಾಪೋಷಕ್ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಮುರಳಿ ಕಡೆಕಾರ್ ಜತೆ ಕಾರ್ಯದರ್ಶಿ ಎಚ್. ಎನ್. ಶೃಂಗೇಶ್ವರ ಸದಸ್ಯರಾದ ಎಚ್. ಎನ್. ವೆಂಕಟೇಶ್ ಉಪಸ್ಥಿತರಿದ್ದರು. ಈತ ಪ್ರತಿವರ್ಷ ಸಂಸ್ಥೆ ಗೆ ದೇಣಿಗೆ ನೀಡುತ್ತಾ ಬಂದಿರುವುದು ಕೃತಜ್ಞತಾಭಾವದ ದ್ಯೋತಕವಾಗಿದೆ.