ನಮ್ಮ ಸಂಸ್ಥೆ ಕಳೆದ 44 ವರ್ಷಗಳಿಂದ ಕಲೆ-ಕಲಾವಿದರಿಗಾಗಿ ಶ್ರಮಿಸುತ್ತಾ, ಮುಖ್ಯವಾಗಿ ಕಲಾವಿದರ ಏಳ್ಗೆಗಾಗಿ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಾ ಬಂದಿದೆ. ಇವುಗಳಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು. ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಸಾಧಕ ಕಲಾವಿದರಿಗೆ, ಕಲಾಸಂಸ್ಥೆಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 17, 2019 ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರುಗಲಿದ್ದು ಆ ದಿನ 17 ಮಂದಿ ಕಲಾವಿದರಿಗೆ ರೂ 20,000/- ನಗದು ಪುರಸ್ಕಾರದೊಂದಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಲಿದ್ದೇವೆ. ಒಂದು ಸಂಸ್ಥೆಗೆ 50,000/- ನಗದು ಪುರಸ್ಕಾರದೊಂದಿಗೆ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ ಹಾಗೂ ಸಂಸ್ಥೆಯ ಓರ್ವ ಸಕ್ರಿಯ ಕಾರ್ಯಕರ್ತರಿಗೆ ಯಕ್ಷಚೇತನ ಪ್ರಶಸ್ತಿ ನೀಡಿ ಗೌರವಿಸಲಿದ್ದೇವೆ.
Good work