ಉಡುಪಿಯ ಶಾಸಕರಾದ ಶ್ರೀ. ಕೆ. ರಘುಪತಿ ಭಟ್ ರವರ ಕಲ್ಪನೆಯ ಯಕ್ಷಶಿಕ್ಷಣ ಟ್ರಸ್ಟ್ ಯಕ್ಷಗಾನ ಕಲಾರಂಗದ ಇನ್ನೊಂದು ವಿಭಾಗವಾಗಿ ಕಾರ್ಯನಿರ್ವಹಿಸುತ್ತಿದೆ. ಉಡುಪಿ ವಿಧಾನಸಭಾ ವ್ಯಾಪ್ತಿಯ 48 ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಲಾಗುತ್ತಿದೆ. ಜೂನ್ ತಿಂಗಳಿನಿಂದ ನವೆಂಬರ್ ತಿಂಗಳಿನವರೆಗೆ ಪರಿಣಿತ ಯಕ್ಷ ಗುರುಗಳನ್ನು ಶಾಲೆಗಳಿಗೆ ಕಳುಹಿಸಿ ಶಾಲಾ ತರಗತಿಗಳ ಅವಧಿಪೂರ್ವ ಯಾ ಅವಧಿಯ ಬಳಿಕ ಯಕ್ಷನೃತ್ಯ ತರಬೇತಿ ನೀಡಿ, ದಶಂಬರ್ ತಿಂಗಳಿನಲ್ಲಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಾಗೂ ಬ್ರಹ್ಮಾವರದ ಬಸ್ಸು ನಿಲ್ದಾಣದ ಬಳಿ ವೇದಿಕೆಯಲ್ಲಿ ಪ್ರದರ್ಶನ ಆಯೋಜಿಸುವ ಸಂಪೂರ್ಣ ಹೊಣೆ ಸಂಸ್ಥೆಯದ್ದು. ಈ ಅಭಿಯಾನದಲ್ಲಿ ಜಾತಿ, ಲಿಂಗ, ಪ್ರಾದೇಶಿಕ ಬೇಧವಿಲ್ಲದೆ 1200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಯಕ್ಷಶಿಕ್ಷಣ ತರಬೇತಿ ಪಡೆದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಗಣನೀಯ ಪ್ರಗತಿ ಕಂಡಿರುತ್ತಾರೆ.
ಗೌಪ್ಯತಾ ನೀತಿ | ನಿಯಮ ಮತ್ತು ಷರತ್ತುಗಳು
ಕೃತಿ ಸ್ವಾಮ್ಯ ಇ-2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿದೆ | ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ –