

















ಯಕ್ಷಗಾನ ಕಲಾರಂಗವು ತನ್ನ ಸದಸ್ಯರಿಗೆ ಕಳೆದ ಮೂರು ವರ್ಷಗಳಿಂದ ಜುಲೈ ತಿಂಗಳಲ್ಲಿ ನಡೆಸುತ್ತಾ ಬಂದ ಮಳೆಗಾಲದ ಎರಡು ಯಕ್ಷಗಾನಗಳಲ್ಲಿ ಒಂದು ಪ್ರದರ್ಶನ 06.07.2025 ರಂದು ಜರಗಿತು. ಪೃಥ್ವಿರಾಜ್ ಕವತ್ತಾರ್ ರವರ ಪರಿಕಲ್ಪನೆ ಮತ್ತು ಸಮಗ್ರ ನಿರ್ದೇಶನದಲ್ಲಿ ಸಾಂಪ್ರದಾಯಿಕ ಪೂರ್ವರಂಗ ಸಹಿತ ಶ್ರೀದೇವಿ ಮಹಾತ್ಮೆ ಸುಂದರವಾಗಿ ಪ್ರದರ್ಶನಗೊಂಡಿತು.