ವಿದ್ಯಾಪೋಷಕ್

ಉಡುಪಿ ಜಿಲ್ಲೆಯ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುವುದರೊಂದಿಗೆ ಅವರ ಕಲಿಕೆಗೆ ಪೂರಕವಾಗುವ ಕಾರ್ಯಾಗಾರ ಮತ್ತು ಸ-ನಿವಾಸ ಶಿಬಿರಗಳನ್ನು ಏರ್ಪಡಿಸುತ್ತಾ ಬಂದಿದೆ. ಈವರೆಗೆ ಒಟ್ಟು 11,692 ವಿದ್ಯಾರ್ಥಿಗಳಿಗೆ ರೂಪಾಯಿ 6,84,38,872/- ನ್ನು ವಿತರಿಸಲಾಗಿದೆ. ಈ ವರ್ಷ 1200 ವಿದ್ಯಾರ್ಥಿಗಳಿಗೆ ರೂಪಾಯಿ 80 ಲಕ್ಷಕ್ಕೂ ಮಿಕ್ಕಿ ವಿದ್ಯಾರ್ಥಿವೇತನ ವಿತರಿಸಲು ಉದ್ದೇಶಿಸಲಾಗಿದೆ. ವಿದ್ಯುತ್ ಸಂಪರ್ಕವಿಲ್ಲದ 127 ಮನೆಗಳಿಗೆ ಸೋಲಾರ್ ಸಂಪರ್ಕ ಕಲ್ಪಿಸಲಾಗಿದೆ. ಈವರೆಗೆ ಮನೆಯಿಲ್ಲದ 35 ವಿದ್ಯಾರ್ಥಿಗಳ ಮನೆಯನ್ನು ನಿರ್ಮಿಸಲಾಗಿದೆ. ಪ್ರತಿವರ್ಷ ಈರ್ವರು ವಿದ್ಯಾರ್ಥಿಗಳಿಗೆ ಲ್ಯಾಪ್-ಟಾಪ್ ವಿತರಿಸಲಾಗುತ್ತಿದೆ. ಎಸ್. ಎಸ್. ಎಲ್. ಸಿ. ಕನ್ನಡ ಮಾಧ್ಯಮದಲ್ಲಿ ಓದಿ ಶೇಕಡಾ 80 ಕ್ಕಿಂತಲೂ ಅಧಿಕ ಅಂಕ ಪಡೆದು , ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಮನೆಗೆ ಸಂಸ್ಥೆಯ ಕಾರ್ಯಕರ್ತರು ಭೇಟಿ ನೀಡಿ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರಗಳನ್ನು ಏರ್ಪಡಿಸಿ ಅವರು ಕಲಿಯುವ ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.

ಪ್ರಾರಂಭ : 2005

  • ಪ್ರತಿಭಾವಂತ ಬಡವಿದ್ಯಾರ್ಥಿಗಳ ವಿದ್ಯಾಭ್ಯಾಸ ಆರ್ಥಿಕ ಅನಾನುಕೂಲತೆಯಿಂದಾಗಿ ನಿಲ್ಲಬಾರದೆಂಬ ಉದ್ದೇಶದಿಂದ 2005 ರಲ್ಲಿ ಆರಂಭ.
  • ಎಸ್. ಎಸ್. ಎಲ್. ಸಿ. ಕನ್ನಡ ಮಾಧ್ಯಮದಲ್ಲಿ ಓದಿ ಪರೀಕ್ಷೆಯಲ್ಲಿ ಶೇಕಡಾ 80 ಕ್ಕಿಂತಲೂ ಅಧಿಕ ಅಂಕಗಳಿಸಿದ ಅರ್ಹ ಬಡವಿದ್ಯಾರ್ಥಿಗಳು  ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
  • ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಮನೆಗೆ ವಿದ್ಯಾಪೋಷಕ್ ಸ್ವಯಂ-ಸೇವಕರು ಭೇಟಿ ನೀಡಿ ಪ್ರತ್ಯಕ್ಷವಾಗಿ ಪರಿಶಿಲಿಸಿ ಅರ್ಹ ವಿದ್ಯಾರ್ಥಿಗಳಿಗೆ ಎಸ್. ಎಸ್. ಎಲ್. ಸಿ. ನಂತರದ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು.
  • 2022-23ನೇ ಸಾಲಿನಲ್ಲಿ ಒಟ್ಟು 1200 ಅರ್ಜಿಗಳು ಸ್ವೀಕೃತವಾಗಿದ್ದು ಸ್ವಯಂಸೇವಕರು ಭೇಟಿಮಾಡಿ ಪರಿಶೀಲಿಸಿ ವರದಿ ನೀಡಿರುತ್ತಾರೆ.
  • ಸೆಲ್ಕೋ ಸೋಲಾರ್ ನ ಪ್ರಾಯೋಜಕತ್ವದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ 130 ವಿದ್ಯಾಪೋಷಕ್ ವಿದ್ಯಾರ್ಥಿಗಳ ಮನೆಗಳಿಗೆ ಸೋಲಾರ್ ದೀಪದ ಸೌಲಭ್ಯ ಕಲ್ಪಿಸಲಾಗಿದೆ.
  • 2022 ರ ಈ ವರ್ಷ 1135 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರೂಪಾಯಿ 89, 85,500/- ವಿದ್ಯಾರ್ಥಿವೇತನ ವಿತರಿಸಲಾಗಿದೆ.
  • ಈವರಗೆ, ಒಟ್ಟು ಕಳೆದ 17 ವರ್ಷಗಳಲ್ಲಿ ದಾನಿಗಳ ನೆರವಿನಿಂದ ಪಿ. ಯು. ಸಿ. ಯಿಂದ ಪದವಿ ಶಿಕ್ಷಣದವರೆಗಿನ 4,153 ವಿದ್ಯಾರ್ಥಿಗಳಿಗೆ ರೂಪಾಯಿ 7,74,24,372/- ಮೊತ್ತದ ನೆರವು ನೀಡಲಾಗಿದೆ.
  • 34 ವಿದ್ಯಾರ್ಥಿಗಳಿಗೆ ನೂತನ ಮನೆ ನಿರ್ಮಾಣ.
  • ಪ್ರತಿ ವರ್ಷ ಎಲ್ಲಾ ಫಲಾನುಭವಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಶಿಬಿರ.
  • ಪ್ರಥಮ ವರ್ಷದ ಪಿ. ಯು.ಸಿ. ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಅಂಬಲಪಾಡಿ ದೇವಳದ ಸಭಾಂಗಣದಲ್ಲಿ 5 ದಿನಗಳ ಸ-ನಿವಾಸ ಶೈಕ್ಷಣಿಕ ಶಿಬಿರ.
  • ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ 6 ದಿನಗಳ ಉದ್ಯೋಗ ಸಿದ್ಧತಾ ಶಿಬಿರದ ಆಯೋಜನೆ.
  • ಪದವಿಪೂರ್ವ (ವಿಜ್ಙಾನ) ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರೈಮ್ ಸಂಸ್ಥೆಯ ವತಿಯಿಂದ ಉಚಿತ ಟ್ಯೂಶನ್ ಮತ್ತು ಸಿ.ಇ.ಟಿ. ತರಬೇತಿ.
  • ಪ್ರತಿ ವರ್ಷ ಇಬ್ಬರು ವಿದ್ಯಾರ್ಥಿಗಳಿಗೆ ಶ್ರೀಮತಿ ಗೀತಾ ಎಲ್. ಎನ್. ಶೆಟ್ಟಿ ಯವರಿಂದ ಲ್ಯಾಪ್-ಟಾಪ್ ನೀಡಲಾಗುತ್ತಿದೆ. ಹಾಗೂ ಸಂಸ್ಥೆಯ ವತಿಯಿಂದ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಲ್ಯಾಪ್-ಟಾಪ್ ನೀಡಲಾಗುತ್ತಿದೆ.

ಗೌಪ್ಯತಾ ನೀತಿ | ನಿಯಮ ಮತ್ತು ಷರತ್ತುಗಳು

ಕೃತಿ ಸ್ವಾಮ್ಯ ಇ-2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿದೆ | ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ  

We're currently hard at work gathering information and crafting content to bring you the best experience. Stay tuned for exciting updates!