ಉಡುಪಿ ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆ ವಿದ್ಯಾಪೋಚಕ್ ನ ಇಂಜಿನಿಯರ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಶೈಕ್ಷಣಿಕ ಸಮಾವೇಶ ಆಗಸ್ಟ್ 27, 2023 ಭಾನುವಾರ ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾಂಗಣದಲ್ಲಿ ಜರಗಿತು. ಖ್ಯಾತ ಅಂಕಣಕಾರ, ಲೇಖಕ ಡಾ. ಬಿ ಭಾಸ್ಕರ್ ರಾವ್, ಡಾ. ಎಂ. ಆರ್. ಹೆಗಡೆ, ರಘುರಾಜ್ ರಾವ್, ಪ್ರವೀಣ್ ವಿ. ಗುಡಿ, ಡಾ. ಯು. ಸಿ. ನಿರಂಜನ್, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾತುಗಳನ್ನಾಡಿದರು.ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಉಪಾಧ್ಯಕ್ಷ ಎಸ್. ವಿ. ಭಟ್, ಜೊತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ ಅಶೋಕ ಎಂ., ಡಾ. ರಾಜೇಶ್ ನಾವಡ, ಗಣೇಶ್ ಬ್ರಹ್ಮಾವರ ಹಾಗೂ ದಾನಿಗಳಾದ ಯು.ವಿಶ್ವನಾಥ ಶೆಣೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸಿದ್ದು, ಈ ಬಾರಿ ಅಕ್ಟೋಬರ್ 1. 2023 ರಂದು ಕುಂದಾಪುರದ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ಜರಗಲಿರುವ ವಿನಮ್ರ ಸಹಾಯಧನ ವಿತರಣಾ ಸಮಾರಂಭದ ಬಗ್ಗೆ ಮಾಹಿತಿ ನೀಡಿದರು.