








ಯಕ್ಷಗಾನ ಕಲಾರಂಗ ಕಿರಿಮಂಜೇಶ್ವರದ ವಿದ್ಯಾಪೋಷಕ್ ಪ್ರಥಮ ಪಿ.ಯು. ವಿದ್ಯಾರ್ಥಿನಿ ತುಳಸಿಗೆ ನಿರ್ಮಿಸಿಕೊಟ್ಟ ಮನೆಯ ಉದ್ಘಾಟನೆ 03.03.2025ರಂದು ಜರಗಿತು. ಯು. ಮಧುಸೂಧನ ಪುತ್ರಾಯ ಇವರು ತಮ್ಮ ಧರ್ಮಪತ್ನಿ ಸರಸ್ವತಿ ಎಂ. ಪುತ್ರಾಯ ಇವರ ಸ್ಮರಣಾರ್ಥ ಪ್ರಾಯೋಜಿಸಿದ ‘ಸರಸ್ವತೀ ಸದನ’ ಮನೆಯನ್ನು ಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಯಕ್ಷಗಾನ ಕಲಾರಂಗದ ಸಮಾಜಪರ ಕೆಲಸಗಳು ಅವರ ಸಮಾಜ ಪ್ರೀತಿ ಮತ್ತು ಸಮತ್ವ ಭಾವಕ್ಕೆ ನಿದರ್ಶನ. ಜನ ಸೇವೆಯೆ ಜನಾರ್ದನ ಸೇವೆ ಎಂಬುದನ್ನು ಮಾಡಿ ತೋರಿಸಿದ ಕೀರ್ತಿ ಈ ಸಂಸ್ಥೆಗಿದೆ. ಸಂಪತ್ತು ಮತ್ತು ಕೊಡುವ ಬುದ್ಧಿ ಎರಡನ್ನೂ ದೇವರಲ್ಲಿ ಬೇಡಿಕೊಳ್ಳ ಬೇಕು ಎಂದು ತಮ್ಮ ಅನುಗ್ರಹ ಸಂದೇಶದಲ್ಲಿ ಹೇಳಿದರು. ಸುದರ್ಶನ ಪುತ್ರಾಯ ಮತ್ತು ಮಧುಸೂದನ ಪುತ್ರಾಯ ಸಹೋದರರು ಸ್ವಾಮೀಜಿಯವರ ಅನುಗ್ರಹದಿಂದ ಪಡೆದುದನ್ನು ಸಮಾಜಕ್ಕೆ ಅರ್ಪಿಸುವಲ್ಲಿ ನಮ್ಮ ಹೆಚ್ಚುಗಾರಿಕೆ ಏನೂ ಇಲ್ಲ ಎಂದು ವಿನಮ್ರವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶ್ರೀಮತಿ ವಿ. ಆಚಾರ್ಯ, ವೀಣಾಧಾರಿಣೀ ಪುತ್ರಾಯ,ಸಂದೀಪ್, ಶಾಲ್ಮಲಿ, ಅಭಿಷೇಕ್, ಶರ್ವಾಣಿ, ಗೀತಾ ಎಂ.ರಾವ್, ಶ್ರೀವತ್ಸ,ಸುಮನಾ, ನಟರಾಜ,ರಾಜಲಕ್ಷೀ, ಆಂಜನೇಯಮೂರ್ತಿ ದಂಪತಿಗಳು,
ಬೆಂಗಳೂರಿನ ಎಸ್.ವೆಂಕಟೇಶ್ ದಂಪತಿಗಳು ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಎಸ್. ವಿ. ಭಟ್, ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಭುವನ ಪ್ರಸಾದ ಹೆಗ್ಡೆ, ವಿಜಯ ಕುಮಾರ ಮುದ್ರಾಡಿ, ಯು.ಶ್ರೀಧರ, ಎ. ನಾಗಭೂಷಣ ಭಟ್, ಕೃಷ್ಣಮೂರ್ತಿ ಭಟ್, ಅನಂತರಾಜ ಉಪಾಧ್ಯಾಯ, ಕಿಶೋರ. ಸಿ.ಉದ್ಯಾವರ, ವಿನೋದಾ ಎಂ. ಕಡೆಕಾರ್ ಶಾಲೆಯ ಮುಖ್ಯೋಪಾಧ್ಯಯರಾದ ಮಂಜು ಎಂ.ಪೂಜಾರಿ ಮತ್ತು ಶಿಕ್ಷಕರು ಭಾಗವಹಿಸಿದ್ದರು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು, ನಾರಾಯಣ ಎಂ.ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ ಸಹಕರಿಸಿದರು. ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.