11-12-2022 ರಂದು ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ ಮತ್ತು ಕಿಶೋರ ಯಕ್ಷಸಂಗಮವು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅರ್ಥಪೂರ್ಣವಾಗಿ ಸಂಭ್ರಮದಿಂದ ಆಚರಿಸಲ್ಪಟ್ಟಿತು. ಪೂರ್ವಾಹ್ನ ಬಾಲ ಕಲಾವಿದರಿಂದ ಗಜಮುಖ ಪ್ರಸ್ತುತಿ, ಹೂವಿನ ಕೋಲು, ಯಕ್ಷಗಾನ ಪ್ರಾತ್ಯಕ್ಷಿಕೆ, ಯಕ್ಷ ರಸಪ್ರಶ್ನೆ, ಚಿಕ್ಕಮೇಳ, ತೆಂಕುತಿಟ್ಟಿನ ಪೀಠಿಕಾ ಸ್ತ್ರೀವೇಷ ನೃತ್ಯ, ಬಡಗುತಿಟ್ಟಿನ ಪಾಂಡವ ಒಡ್ಡೋಲಗ ನೃತ್ಯ ವ್ಯವಸ್ಥಿತವಾಗಿ ಸಂಪನ್ನಗೊಂಡಿತು. ಬಳಿಕ ಪರ್ಯಾಯ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಸಚಿವರು, ಶಾಸಕರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಯಕ್ಷಗುರುಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾವಿರಕ್ಕೂ ಮೇಲ್ಪಟ್ಟು ಯಕ್ಷಶಿಕ್ಷಣ ವಿದ್ಯಾರ್ಥಿಗಳಿಗೆ ಪೂನಾದ ಪ್ರವೀಣ್ ಶೆಟ್ಟಿ ಪ್ರಾಯೋಜಕತ್ವದಲ್ಲಿ ಸ್ಮರಣಿಕೆ ನೀಡಲಾಯಿತು. ಆ ಬಳಿಕ ಎರಡು ಪ್ರೌಢಶಾಲೆಗಳ ಯಕ್ಷಗಾನ ಪ್ರದರ್ಶನ ಸೊಗಸಾಗಿ ಪ್ರಸ್ತುತಗೊಂಡಿತು.